ಸುದ್ದಿ ಕನ್ನಡ ವಾರ್ತೆ
ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಭಾಗವಹಿಸಿದ ಜೋಯಿಡಾ ಶ್ರೀ ರಾಮ ಪ್ರೌಢ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಕುಮಾರಿ. ಶ್ರಾವಣಿ ಮಹೇಂದ್ರ ಹರ್ಚಿಲ್ಕರ್ ಇವಳು ಬಾವಗೀತೆ ಮತ್ತು ಘಜಲ್ ನಲ್ಲಿ ಭಾಗವಹಿಸಿ ಎರಡ ರಲ್ಲೂ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದಾಳೆ.
ಶ್ರಾವಣಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುವುದು ತಾಲೂಕಿನಲ್ಲಿ ಸಂಭ್ರಮ ತಂದಿದೆ. ಶ್ರಾವಣಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುವುದಕ್ಕೆ ಶ್ರೀ ರಾಮ ಪ್ರೌಢ ಶಾಲೆಯ ಶಿಕ್ಷಕರು ಪಾಲಕರು ಅಭಿನಂದಿಸಿದ್ದಾರೆ.
ರಾಜ್ಯ ಮಟ್ಟದಲ್ಲೂ ಉತ್ತಮ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ, ಶ್ರಾವಣಿ ತಾಲೂಕಿನ ಸಂಗೀತ ಗಾರ ಮಹೇಂದ್ರ ಹರ್ಚಿಲ್ ಕರ ಅವರ ಪುತ್ರಿ ಆಗಿದ್ದಾಳೆ.
