ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಮೈತ್ರೀ ಸಂಸ್ಕೃತ- ಸಂಸ್ಕೃತಿ ಪ್ರತಿಷ್ಠಾನಮ್ ವತಿಯಿಂದ ಸಂಸ್ಕೃತಿ ಪಲ್ಲವ – ಸಂಸ್ಕಾರ ಶಿಕ್ಷಣ ಯೋಜನೆಯು
ಇಡೀ ಕರ್ನಾಟಕದ 5,6,7 ನೇ ತರಗತಿಯ ಮಕ್ಕಳಿಗೆ ನಿಶುಲ್ಕವಾಗಿ ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನ ಪುಸ್ತಕ ರೂಪದಲ್ಲಿ ತಲುಪಿಸುವಂತಹ ಉದ್ದೇಶವನ್ನು ಹೊಂದಿದೆ ಎಂದು ಡಾ. ಗಣಪತಿ ಭಟ್ ನುಡಿದರು.
ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಾಗೋಡಿನಲ್ಲಿ ಆಯೋಗಿಸಿದ್ದ ಆಲೆಮನೆ ಹಬ್ಬದಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಹೊಸ್ಥಿತರಿದ್ದು ಅವರು ಮಾತನಾಡುತ್ತಿದ್ದರು.
ಇದು ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ವಿ ಶ್ರೀಶಾನಂದ ಹಾಗು ಅನೇಕ ವಿದ್ವನ್ಮಣಿಗಳ ಅಮೃತ ಹಸ್ತದಿಂದ ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ಸಾವಿರಾರು ಸಂಸ್ಕೃತ ಪ್ರೇಮಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆಗೊಂಡು
ನಾಡಿನ ಅನೇಕ ಜಿಲ್ಲಾಕೇಂದ್ರಗಳನ್ನು ಈಗಾಗಲೇ ತಲುಪಿದೆ ಎಂದು ಮೈತ್ರಿ ಪ್ರತಿಷ್ಠಾನಮ್ ನ ಡಾ. ಗಣಪತಿ ಭಟ್ ನುಡಿದರು.
ನಮ್ಮ ಸಂಸ್ಕೃತಿ ನಮ್ಮ ಆಯ್ಕೆ.
ಈ ಕಾರಣದಿಂದ ನಮ್ಮ ಇಷ್ಟಾನಿಷ್ಟಗಳನ್ನು ನಾವೇ ನಿರ್ಧರಿಸಬೇಕು. ಇದನ್ನ ಯಾವುದೇ ಜನಪ್ರತಿನಿಧಿ ನಿರ್ಧರಿಸಿ ನಿರ್ಣಯಿಸಲು ಸಾಧ್ಯವಿಲ್ಲ ಹಾಗು ಪ್ರಜ್ಞಾವಂತರಾದ ನಾವು ಅದಕ್ಕೆ ಅವಕಾಶವನ್ನು ಕೂಡ ಕೊಡಬಾರದು.
ನಮ್ಮ ಮಕ್ಕಳಿಗೆ ಸನಾತನ ಮೂಲವಾದ ಸಂಸ್ಕೃತವನ್ನು ಸಂಸ್ಕೃತಿಯೊಂದಿಗೆ ಸರಳವಾಗಿ ನೀಡಬೇಕು ಎಂದು ಕನಸು ಕಟ್ಟಿಕೊಂಡು ಬೆಂಗಳೂರಿನಲ್ಲಿ ಹೆಚ್ಚಿನ ಅಧ್ಯಯನ ನಡೆಸಲು ತೆರಳಿ, ಇಂದು ನನ್ನ ಸ್ವಂತ ಊರಿನ ಮಕ್ಕಳ ಎದುರಿನಲ್ಲಿ ಈ ಯೋಜನೆಯನ್ನು ತಲುಪಿಸುವ ಸಂದರ್ಭದಲ್ಲಿ ಹಳ್ಳಿಯ ಹುಡುಗ ಕೂಡ ತನ್ನ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯ ಎನ್ನುವುದು ಜ್ವಲಂತ ಉದಾಹರಣೆ.
5 ರಿಂದ 10ನೇ ತರಗತಿಯವರೆಗೆ ಸಂಸ್ಕೃತಿ ಪಲ್ಲವ ಪುಸ್ತಕವನ್ನು ಎಲ್ಲಾ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡುವುದರಿಂದ ಅವರಲ್ಲಿ ಸಂಪೂರ್ಣವಾಗಿ ವ್ಯಕ್ತಿತ್ವವು ವಿಕಾಸಗೊಂಡು, ಆ ಸಂಸ್ಕಾರವಂತ ಮಗುವು ಮುಂದೆ ತನ್ನ ಸಂಸ್ಕೃತಿಯ ದೃಷ್ಟಿಯ ನೆಲೆಯಲ್ಲಿ ತನ್ನ ಜೀವನವನ್ನು ರೂಪಿಸಿಕೊಂಡು, ತನೊಬ್ಬ ಭಾರತೀಯ ಸಂಸ್ಕೃತಿಯ ಉತ್ತಮ ಪ್ರತಿನಿಧಿಯಾಗುತ್ತದೆ ಎಂದು ಡಾ. ಗಣಪತಿ ಬಟ್ ನುಡಿದರು.
ಈ ದಿಶೆಯಲ್ಲಿ ಮಾಗೋಡು ಆಲೆಮನೆ ಉತ್ಸವ ಸಮಿತಿ ಹಾಗೂ ಶ್ರೀಮತಿ ಶ್ವೇತಾ ಹೆಗಡೆ ಹಾಗು ಸರಸ್ವತೀ ಹೆಗಡೆ ಇವರು ಮೈತ್ರೀಯ ಯೋಜನೆಯನ್ನು ಈ ದಟ್ಟ ಕಾನನದ ಪುಟ್ಟ ಹಳ್ಳಿಯಲ್ಲಿನ ಎಲ್ಲ ಚಿಕ್ಕಮಕ್ಕಳಿಗೆ ತಲುಪಿಸುವಲ್ಲಿ ಸಹಕಾರಿಯಾಗಿದ್ದಾರೆ. ಹೀಗೆಯೇ ಕರ್ನಾಟಕದ ಎಲ್ಲಾ ಹಳ್ಳಿಯ ಮೂಲೆ ಮೂಲೆಗೂ ಇದು ತಲುಪಬೇಕು. ತಲುಪಿಸುವ ಜವಾಬ್ದಾರಿ ಸಂಸ್ಕೃತಿಯ ಹಿತಚಿಂತಕರದ್ದು. ಸಂಸ್ಕೃತ ಸಂಸ್ಕೃತಿಯ ಪ್ರಸಾರ ಕಾರ್ಯದಲ್ಲಿ ಮೈತ್ರೀ ಸದಾ ಹೊಸ ಹೊಸ ರೂಪದಲ್ಲಿ ಇಂತೆಯೇ ನಿಮ್ಮ ಮುಂದೆ ವರ್ಷವೂ ಬರಲಿದೆ. ಹೀಗೆಯೇ ನಮ್ಮನ್ನು ಸದಾ ನಮ್ಮ ಸಂಸ್ಕಾರ ಶಿಕ್ಷಣ ಪ್ರಸಾರದ ಯೋಜನೆಯನ್ನೂ ಬರಮಾಡಿಕೊಳ್ಳುವುದೇ ನಮಗೆ ನೀವು ಮಾಡುವ ಸಮ್ಮಾನ ಎಂದರು.
ವೇದಿಕೆಯಲ್ಲಿ ನರಸಿಂಹ ಭಟ್ ಮಾಗೋಡು ಆಲೆಮನೆ ಉತ್ಸವದ ಅಧ್ಯಕ್ಷರು, ಡಾ|| ಗಣಪತಿ ಹೆಗಡೆ
ಪ್ರಾಂಶುಪಾಲರು ಎಂಎಲ್ಎ ಪಿಯು ಕಾಲೇಜು ಬೆಂಗಳೂರು ಹಾಗು ಅಧ್ಯಕ್ಷರು ಮೈತ್ರೀ ಪ್ರತಿಷ್ಠಾನಮ್, ವಿದುಷಿ ಭವಾನಿ ಹೆಗಡೆ ಸಿಂಡಿಕೇಟ್ ಸದಸ್ಯರು ksu ಬೆಂಗಳೂರು, ಶ್ರೀಮತಿ ಧನ್ಯಶ್ರೀ ಭಟ್ ಮೈತ್ರೀಯ ಯಲ್ಲಾಪುರ ಪ್ರತಿನಿಧಿ ಹಾಗು ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ ಶ್ರೀಮತಿ ಶ್ವೇತಾ ಹೆಗಡೆ ಹಾಗು ಸರಸ್ವತೀ ಭಟ್ ಇದ್ದರು.
ಈ ಸಂದರ್ಭದಲ್ಲಿ ಡಾ. ಗಣಪತಿ ಭಟ್ ರವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು