ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಉಳವಿ ಜಾತ್ರೆಯ ಪೂರ್ವ ಬಾವಿ ಸಭೆ ಯನ್ನು ಬರುವ ದಿನಾಂಕ 26 ರ ಬುಧವಾರ ಬೆಳಿಗ್ಗೆ 10 30ಕ್ಕೆ ಉಳವಿ ಚನ್ನಬಸವೇಶ್ವರ ಸಭಾ ಭವನ ದಲ್ಲಿ ಕರೆಯಲಾಗಿದೆ, ಸಭೆಯ ಅಧ್ಯಕ್ಷತೆ ಯನ್ನು ಕಾರವಾರ ದ ಸಹಾಯಕ ಕಮಿಷನರ ಅವರು ವಹಿಸುವರು, ಉಳವಿ ಶ್ರೀ ಚನ್ನಬಸವಣ್ಣ ನವರ ಜಾತ್ರೆಯು ಬರುವ ಜನೆವರಿ 25ರಿಂದ ಪೆಬ್ರುವರಿ 5 ರ ವೆರೆಗೆ ನಡೆಯಲಿದೆ, ಹಾಗಾಗಿ ಜಾತ್ರೆಗೆ ಬರುವ ಲಕ್ಷಾಂತರ ಜನರಿಗೆ ವಸತಿ, ಕುಡಿಯುವ ನೀರು ನೈರ್ಮಲ್ಯ, ವಿದ್ಯುತ್, ಆರೋಗ್ಯ, ಚಕ್ಕಡಿ ಯೊಂದಿಗೆ ಬರುವ ಎತ್ತು ಗಳ ಆರೋಗ್ಯ ವ್ಯವಸ್ಥೆ ,ಸಾರಿಗೆ ವ್ಯವಸ್ಥೆ ರಸ್ತೆ ದುರಸ್ತಿ ಅಂಗಡಿ ಮುಂಗಟ್ಟು ಗಳ ಜಾಗೆಯ ವ್ಯವಸ್ಥೆ ಟೋಲ್ ನಾಕಾ ಕೆಲಸ ಪಾರ್ಕಿಂಗ್ ವ್ಯವಸ್ಥೆ, ಇನ್ನಿತರ ವ್ಯವಸ್ಥೆ ಗಳ ಬಗ್ಗೆ ಚರ್ಚಿಸಲು ಈ ಸಭೆ ಯನ್ನು ಕರೆಯಲಾಗಿದೆ , ಅರಣ್ಯ ಇಲಾಖೆ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆ ಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸ ಲಿರುವರು ಎಂದು ತಾಲೂಕಾ ದಂಡಾಧಿಕಾರಿ ಮಂಜುನಾಥ ಮುನ್ನೊಳ್ಳಿ ಲಿಖಿತ ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
