ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ಹಾಗೂ ಕೆನರಾ ಬ್ಯಾಂಕ್ ರಾಮನಗರ ಇವರ ಸಹಯೋಗ ದೊಂದಿಗೆ ಕೆನರಾ ಬ್ಯಾಂಕ್ ಸಂಸ್ಥಾಪನೆ ಅಂಗವಾಗಿ ರಾಮನಗರದಲ್ಲಿ ಬ್ಯಾಂಕ್ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದ ಉದ್ಘಾಟಿಸಿದ ಸಂತೋಷ ಸಂಪಗಾವ್, ವ್ಯವಸ್ಥಾಪಕರು ಕೆನರಾ ಬ್ಯಾಂಕ್ ರಾಮನಗರ ಇವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತ ಬ್ಯಾಂಕಿನಲ್ಲಿ ಸಿಗುವ ಸಾಲ ಸೌಲಭ್ಯಗಳು ಕುರಿತು ಮತ್ತು ಸಮಯಕ್ಕೆ ಸರಿಯಾಗಿ ಸಾಲದ ಮರುಪಾವತಿ ಬಗ್ಗೆ ಮಾತನಾಡಿದರು ಜೊತೆಗೆ ಬ್ಯಾಂಕಿನಸಾಲವನ್ನು ಮೂರು ಸಂಘಗಳಾದ ಶ್ರೀ ಶಾಂತದುರ್ಗ ಸ್ವ ಸಹಾಯ ಸಂಘ ರಾಮನಗರಕ್ಕೆ ರೂ -15 ಲಕ್ಷ, ಶ್ರೀ ದುರ್ಗಾಶಕ್ತಿ ಸ್ವ ಸಹಾಯ ಸಂಘ ಕ್ಕೆ ರೂ
-12 ಲಕ್ಷ ಮತ್ತು ಶ್ರೀ ರಾಮಲಿಂಗ ಸ್ವ ಸಹಾಯ ಸಂಘಕ್ಕೆ ರೂ -3 ಲಕ್ಷ ಒಟ್ಟು 30 ಲಕ್ಷ ಬ್ಯಾಂಕ್ ಸಾಲವನ್ನುವಿತರಿಸಿದರು ರಾಮನಗರದ ಮುಶಣು ಪಾಟೀಲ್ ಬ್ಯಾಂಕಿನ ಕ್ಲರ್ಕ್ ಇವರು ಸದಸ್ಯರಿಗೆ ಪಿಎಂ ಜೆ ಜೆ ಬಿವೈ ಮತ್ತು ಪಿಎಂ ಎಸ್ ಬಿ ವೈ ಇನ್ಸುರೇಶನ್ ಕುರಿತು ಮಾಹಿತಿ ನೀಡಿದರು ಕಾರ್ಯಕ್ರಮದಲ್ಲಿ ಪ್ರಾಸ್ತವಿಕವಾಗಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಇವರು ಮಾತನಾಡುತ್ತ ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕಿನ ಸಾಲದಿಂದ ಆದಾಯ ಬರುವಂತ ಚಟುವಟಿಕೆ ಗಳನ್ನು ಮಾಡಿ ಮತ್ತು ಸ್ವಉದ್ಯೋಗ ಕೈಗೊಳ್ಳಿ ಎಂದು ಹೇಳಿದರು ಮನೋಹರ್ ಚವರಿಯವರ ಕ್ಷೇತ್ರ ಮೇಲ್ವಿಚಾರಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಉಪ ಶಾಖೆ ರಾಮನಗರ ಇವರು ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟರು.
