ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಗುಂದ ಶಾಲೆಯ ವಿದ್ಯಾರ್ಥಿಗಳು ಅಂಬೋಳಿಯಲ್ಲಿ ನಡೆದ ನಂದಿಗದ್ದೆ ಕ್ಲಸ್ಟರಿನ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಸಾಧನೆ ಮಾಡಿರುತ್ತಾರೆ.

ಕಿರಿಯರ ವಿಭಾಗ
1.ತ್ರಿಷಾ ಕುಟ್ಟಿಕರ- ಆಶುಭಾಷಣ – ಪ್ರಥಮ,
2.ತ್ರಿಷಾ ಕುಟ್ಟಿಕರ – ಕಥೆ ಹೇಳುವುದು – ಪ್ರಥಮ
3.ಅಶ್ವಥ್ ಗಾಂವ್ಕರ – ದೇಶಭಕ್ತಿ ಗೀತೆ – ದ್ವಿತೀಯ
4.ಅಶ್ವಥ್ ಗಾಂವ್ಕರ – ಭಕ್ತಿಗೀತೆ – ದ್ವಿತೀಯ,
5.ಅಮೃತಾ ಪಾಡಕರ – ಧಾರ್ಮಿಕ ಪಠಣ ಸಂಸ್ಕೃತ- ದ್ವಿತೀಯ
6.ಮದುರಾ ನಾಯ್ಕ- ಕ್ಲೇ ಮಾಡಲಿಂಗ – ದ್ವಿತೀಯ
ಹಿರಿಯರ ವಿಭಾಗ
1.ಮಯೂರ ಕುಟ್ಟಿಕರ – ದೇಶಭಕ್ತಿ ಗೀತೆ – ದ್ವಿತೀಯ
2.ಗೌತಮ್ ಸಾವರಕರ – ಕಥೆ ಹೇಳುವುದು – ತೃತೀಯ
3.ಸಾಕ್ಷಿ ಕುಟ್ಟಿಕರ – ಪ್ರಬಂಧ ರಚನೆ – ತೃತೀಯ
4.ಮಯೂರ ಕುಟ್ಟಿಕರ – ಧಾರ್ಮಿಕ ಪಠಣ ಸಂಸ್ಕೃತ – ತೃತೀಯ. ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಯಲ್ಲಿ ಉತ್ತಮ ತರಬೇತಿ ನೀಡಿದ ಶಿಕ್ಷಕಿಯರಿಗೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ,ಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು,ಪೋಷಕರು,ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು,ಗ್ರಾಮ ಪಂಚಾಯತ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.