ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಯರಮುಖ ದ ಶ್ರೀ
ಸೋಮೇಶ್ವರ ದೇವಸ್ಥಾನ ದಲ್ಲಿ ಕಾರ್ತಿಕ ಮಾಸದ ಕೊನೆಯ ಸೋಮವಾರ ಆಡಳಿತ ಮಂಡಳಿಯ ಸೂಚನೆಯಂತೆ ಸಾಯಂಕಾಲ ಭಕ್ತರು ಸೇರಿ ದೀಪಾರಾಧನೆ ಭಜನೆ ನಡೆಸಿದರು ಶ್ರೀ ಸೋಮೇಶ್ವರ ದೇವರಿಗೆ ಅಲಂಕಾರ ಮಾಡಿ ದೇವಸ್ಥಾನ ದ ಪ್ರಾಂಗಣದ ಸುತ್ತ ಮುತ್ತಲು ಮಾತೆಯರು ಮಹನೀಯರು ದೀಪ ಬೆಳಗಿಸುವ ಮೂಲಕ ದೀಪಾರಾಧನೆಗೆ ಹೆಚ್ಚಿನ ಮೆರಗು ನೀಡಿದರು ಇದೇ ಸಂದರ್ಭದಲ್ಲಿ ಮಾತೆಯರು ಭಜನೆ ಸಂಗೀತ ನಡೆಸಿದರು,

ಸಾಲು ಸಾಲು ದೀಪಗಳ ಹಬ್ಬ ಸೇರಿದ ಭಕ್ತರಲ್ಲಿ ಧನ್ಯತಾ ಬಾವಮೂಡಿಸುತ್ತಿತ್ತು ಊರಿನ ಸುತ್ತ ಮುತ್ತಲಿನ ಜನರು ಯರಮುಖ ದ ಶ್ರೀ ಸೋಮೇಶ್ವರ ದೇವಸ್ಥಾನದ ದೀಪಾರಾಧನೆ ಯಲ್ಲಿ ಭಾಗವಹಿಸಿ ಧನ್ಯರಾದರು. ಇದೇ ಸಂದರ್ಭದಲ್ಲಿ ವೇದಮೂರ್ತಿ ಪ್ರಸನ್ನ ಭಟ್ಟ ವೇದಮೂರ್ತಿ ಪ್ರವೀಣ ಭಟ್ಟ ದೇವಸ್ಥಾನ ದ ಅಧ್ಯಕ್ಷ ಮಂಜುನಾಥ ಭಾಗ್ವತ ಮಾಜಿ ಅಧ್ಯಕ್ಷ ಡಿ ಟಿ ಹೆಗಡೆ ಇವರ ನೇತೃತ್ವದಲ್ಲಿ ಶ್ರೀ ದೇವರಿಗೆ ಮಹಾ ಮಂಗಳಾರತಿ ವೈಭವದಿಂದ ನಡೆಯಿತು ಪ್ರದಾನ ಅರ್ಚಕ ಶಂಕರ ಆಳ್ಕೆ ಮತ್ತು ಅರ್ಚಕ ಮೂರ್ತಿ ಭಟ್ಟ ಮಹಾಪೂಜೆಯಲ್ಲಿ ಪಾಲ್ಗೊಂಡು ಸಹಕರಿಸಿದರು, ಭಕ್ತರು ತೀರ್ಥ ಪ್ರಸಾದ ಪಡೆದು ಧನ್ಯರಾದರು.