ಸುದ್ದಿ ಕನ್ನಡ ವಾರ್ತೆ
ಜೊಯಿಡಾ ದಲ್ಲಿ ಮಕ್ಕಳ ದಿನಾಚರಣೆ ತಾಲೂಕಿನ ಕಾರಟೋಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಮಕ್ಕಳಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಭೆಯ ಅಧ್ಯಕ್ಷತೆ ವಹಿಸಿರುವ ಶಾಲೆಯ ಮುಖ್ಯಮಂತ್ರಿ ಕುಮಾರಿ ಶ್ರೇಯಾ ವೇಲಿಪ ಮಕ್ಕಳು ಶಿಕ್ಷಣಕ್ಕೆ ಮೊದಲು ಆದ್ಯತೆ ಕೊಟ್ಟು ಸರಿಯಾಗಿ ದಿನಾಲೂ ಅಭ್ಯಾಸ ಮಾಡುವ ಮೂಲಕ ಶಾಲೆಗೆ ಗುರು ಹಿರಿಯರಿಗೆ ಗೌರವ ಸಲ್ಲಿಸಬೇಕು ಎಂದು ಮಕ್ಕಳಲ್ಲಿ ವಿನಂತಿಸಿ ಮಾತನಾಡಿದರು.
ಶಾಲೆಯ ಆಹಾರ ಮಂತ್ರಿ ಕುಮಾರಿ ಪ್ರಾಚಿ ವೇಲಿಪ ಮಾತನಾಡುತ್ತ ಇವತ್ತು ಪಂಡಿತ ಜವಾಹರಲಾಲ ನೆಹರೂ ರವರ ಜನ್ಮದಿನ ಈ ದಿನವನ್ನು ಅವರ ನೆನಪಿಗಾಗಿ ಮಕ್ಕಳ ದಿನಾಚರಣೆಗಾಗಿ ಆಚರಿಸುತ್ತಿದ್ದೇವೆ. ಎಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆಮೇಲೆ ಶಾಲೆಯ ಉಪಮುಖ್ಯಮಂತ್ರಿ ಕುಮಾರ ಕೇಶವ ವೆಲಿಪ, ಗೃಹಮಂತ್ರಿ ನೀಲೇಶ ಬೊಂಡೇಲ್ಕರ್, ಕಲ್ಪೇಶ ವೆಲಿಪ, ವಿರಾಜ ಬೊಂಡೇಲ್ಕರ್ ಉಪಸ್ತಿತರಿದ್ದರು. ಕೇಶವ ವೆಲಿಪ ಸ್ವಾಗತಿಸಿ, ವಿರಾಜ ಬೊಂಡೇಲ್ಕರ ವಂದಿಸಿದರು ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ಈ ಸಂದರ್ಭದಲ್ಲಿ ಶಾಲಾ ಮುಖ್ಯಾದ್ಯಾಪಕ ವಿನಾಯಕ ಪಟಗಾರ, ಸಹಶಿಕ್ಷಕಿ ರಮ್ಯಾ, ಎಸ್ ಡಿ ಎಂ ಸಿ ಅಧ್ಯಕ್ಷರಾದ ವಿನೋದ ವೆಲಿಪ ಉಪಾಧ್ಯಕ್ಷರಾದ ಶ್ರೀಮತಿ ಕಲ್ಪನಾ ವೆಲಿಪ, ಗ್ರಾಮ ಪಂಚಾಯತ್ ಅಧ್ಯಕ್ಷರು ದಿವ್ಯಾ ನಾಯ್ಕ್,ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಸಂಗೀತಾ ವೆಲಿಪ, ಪ್ರೇಮಾನಂದ ವೇಲಿಪ್, ಪ್ರೇಮಾನಂದ ಗುಣೊ ವೆಲಿಪ,ದಶರಥ ವೆಲಿಪ, ಸಂತೋಷ ವೆಲಿಪ, ಮಂಜುನಾಥ ವೆಲಿಪ್,ಮುಂತಾದವರು ಪಾಲಕರು, ಪೋಷಕರು , ಹಳೇ ವಿದ್ಯಾರ್ಥಿ ಸಂಘದವರು, ಸಾರ್ವಜನಿಕರು ಉಪಸ್ಥಿತರಿದರು. ಮಕ್ಕಳ ಕಾರ್ಯಕ್ರಮದ ನಂತರ ಅಧ್ಯಕ್ಷರಾದ ವಿನೋದ ವೆಲಿಪ ಇವರ ಅಧಕ್ಷತೆಯಲ್ಲಿ ಪಾಲಕ ಪೋಷಕರ ಮಹಾಸಭೆ ನಡೆಯಿತು.
