ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಉಪ ತಹಸೀಲ್ದಾರ ಸಂಜೀವ ಭಜಂತ್ರಿ ಅಂದರೆ ಸಾಕು ಹೆಚ್ಚಿನವರಿಗೆ ಗೊತ್ತಿದೆ ಉತ್ತಮ ಆಡಳಿತಗಾರ ಎಂಬ ಬಗ್ಗೆ ಎರಡು ಮಾತಿಲ್ಲ, ಕಚೇರಿಗೆ ಯಾರೇಬರಲಿ ಅವರೊಂದಿಗೆ ಮಾತನಾಡಿ ಅವರ ಕೆಲಸ ಏನೆಂದು ತಿಳಿದು ಮುಗಿಸಿ ಮತ್ತೆ ಕಳಿಸುವ ವರಗೆ ಕಾಳಜಿ ಇಂದ ನೋಡುತ್ತಾರೆ,

ಜೋಯಿಡಾ ಆಡಳಿತ ಸೌದ ದಲ್ಲಿ ಕಳೆದ 2019 ರಿಂದ ಉಪತಹಶೀಲ್ದಾರ ಆಗಿರುವ ಸಂಜೀವ ಭಜಂತ್ರಿ ಅವರ ದಿನಚರಿಯ ಕಥೆ.ಇದು ಕಳೆದ ಹಲವು ವರ್ಷ ಗಳಿಂದ ಜಿಲ್ಲೆಯಲ್ಲಿ ಕಂದಾಯ ಇಲಾಖೆಯಲ್ಲಿ ಯಾವುದೇ ಕಳಂಕ ವಿಲ್ಲದೇ ಕೆಲಸ ಮಾಡಿದ ಹೆಗ್ಗಳಿಕೆ ಭಜಂತ್ರಿ ಅವರದು ತಮ್ಮ ಸ್ವಂತ ಊರಾದ ಅಥಣಿ ಯಿಂದ ಉತ್ತರ ಕನ್ನಡ ಜಿಲ್ಲೆಗೆ ಬಂದವರು ತಮ್ಮ ಸೇವೆಯನ್ನು ಇಲ್ಲಿಯೇ ಮುಂದು ವರಿಸಿದ್ದು ಸಂತೋಷದ ವಿಷಯ ಕೆಲವರು ತಮ್ಮ ಜಿಲ್ಲೆಗೆ ವರ್ಗಾವಣೆ ಮಾಡಿಸಿ ಕೊಳ್ಳುವ ಇಂತ ಸಂದರ್ಭದಲ್ಲಿ ಸoಜೀವ್ ಅವರು ಜನಸೇವೆ ಎಲ್ಲಿ ಯಾದರೂ ಒಂದೇ ಎಂದು ಜಿಲ್ಲೆಯಲ್ಲಿಯೇ ಕರ್ತವ್ಯ ನಿರ್ವಹಿಸುತ್ತಿರುವುದು ಸಂತಸದ ವಿಷಯ. ಜೋಯಿಡಾ ಕ್ಕೆ ಕಳೆದ 2019 ರಲ್ಲಿ ಬಂದು ತಮ್ಮ ಕರ್ತವ್ಯಕ್ಕೆ ಚ್ಯುತಿ ಆಗದಂತೆ ಕೆಲಸ ಮಾಡುತ್ತಿದ್ದಾರೆ ಆಡಳಿತದ ಜವಾಬ್ದಾರಿ ,ಗ್ರೇಡ್ 2ತಹಶೀಲ್ದಾರ ಮತ್ತು ಸುಪಾ ಹೋಬಳಿಯ ಜವಾಬ್ದಾರಿ ಎಲ್ಲವನ್ನೂ ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಅವರಿಗೆ ತಹಶೀಲ್ದಾರ್ ಆಗುವ ಎಲ್ಲ ವಿಶೇಷತೆ ಗಳಿದ್ದು ಬೇಗನೇ ಈ ಅವಕಾಶ ಒದಗಿ ಬರಲಿ ಎಂದು ಜನತೆ ಅವರ ಮದುವೆಯ 35ನೇ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಹಾರೈಸಿದ್ದಾರೆ. ಧರ್ಮಪತ್ನಿ ಮಕ್ಕಳ ಕುಟುಂಬ ಮೊಮ್ಮಕ್ಕಳು ಎಲ್ಲರೂ ಸೇರಿರುವ ಸುಮದುರ ಸಂಸಾರ ಭಜಂತ್ರಿ ಅವರದ್ದಾಗಿದೆ. ಅವರ ಸೇವೆಯಲ್ಲಿ ಅವರಿಗೆ ಬೇಗನೆ ಪದೋನ್ನತಿ ಆಗಲಿ ಎನ್ನುವುದು ಎಲ್ಲರ ಹಾರೈಕೆ ಯಾಗಿದೆ