ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಮನಗರ ಕ್ಲಸ್ಟರಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಮನಗರದ ಕಿತ್ತೂರ ರಾಣಿ ಚೆನ್ನಮ್ಮ ಶಾಲೆಯ ವಿದ್ಯಾರ್ಥಿಗಳು ಹಿರಿಯರ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.
ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಹಿಂದಿ ಕಂಠಪಾಠ,ಅನ್ವಿ (ಪ್ರಥಮ).ಪ್ರಬಂಧ ರಚನೆ ಗೀತಾಂಜಲಿ,(ಪ್ರಥಮ).ಚಿತ್ರಕಲೆ ಆದಿತಿ ಎನ್(ಪ್ರಥಮ).ಇಂಗ್ಲಿಷ್ ಕಂಠಪಾಠ ಆರಾಧ್ಯ ಹೆಚ್(ದ್ವಿತೀಯ).ಧಾರ್ಮಿಕ ಪಠಣ ಸಂಸ್ಕೃತ, ಕೀರ್ತಿ ಹೆಚ್,(ದ್ವಿತೀಯ).ಆಶು ಭಾಷಣ ಜ್ಯೋತಿ ಎಸ್,(ದ್ವಿತೀಯ).ಕವನ/ ವಾಚನ/ಪದ್ಯವಾಚನ, ಮುಕ್ತಾಬಾಯಿ,(ದ್ವಿತೀಯ).ಮಿಮಿಕ್ರಿ,ಸಂಜನಾ ಎಲ್,(ದ್ವಿತೀಯ).ಕಥೆ ಹೇಳುವುದು,ವಿದ್ಯಾ ಓ,(ತೃತೀಯ).ಅಭಿನಯ ಗೀತೆ,ಚಂದನಾ ವಾಲ್ಮೀಕಿ,(ತೃತೀಯ).ಭಕ್ತಿ ಗೀತೆ,ಪೂರ್ವಿ ಬಾಂದೇಕರ(ತೃತೀಯ).ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಪ್ರಾಂಶುಪಾಲರು,ಸಹ ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಯಲ್ಲಿ ತರಬೇತಿ ನೀಡಿದ ಶಿಕ್ಷಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಪಾಲಕರು,ಪೋಷಕರು, ಅಭಿನಂದನೆ ಸಲ್ಲಿಸಿದ್ದಾರೆ.
