ಸುದ್ದಿ ಕನ್ನಡ ವಾರ್ತೆ
. ಜೋಯಿಡಾ:ತಾಲೂಕಿನ ರಾಮನಗರ ಕ್ಲಸ್ಟರಿನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹನುಮಾನಲೇನ ಶಾಲೆಯ ವಿದ್ಯಾರ್ಥಿಗಳು ಕಿರಿಯರ ಹಾಗೂ ಹಿರಿಯರ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ.
ಕಿರಿಯರ ವಿಭಾಗದಲ್ಲಿ ಚಿತ್ರಕಲೆ ಸ್ಪರ್ಧೆಯಲ್ಲಿ ಸ್ವರಾ ಮಿರಾಶಿ,(ಪ್ರಥಮ).ಆಶು ಭಾಷಣ,ವಿನಯ ಸೋಲೆಕರ,ಪ್ರಥಮ.ಭಕ್ತಿಗೀತೆ,ಅಭಯ ಮಿರಾಶಿ, ದ್ವಿತೀಯ. ಛದ್ಮವೇಷ,ಆರೋಹಿ ನಾಯ್ಕ (ತೃತೀಯ).ಅಭಿನಯ ಗೀತೆ ತೇಜಸ್ವಿನಿ ಮಿರಾಶಿ(ತೃತೀಯ). ಹಿರಿಯರ ವಿಭಾಗದ ಸ್ಪರ್ಧೆಯಲ್ಲಿ ಹಿಂದಿ ಕಂಠಪಾಠ,ಟೇಜಾ ಗಾವಡಾ(ದ್ವಿತೀಯ).ಸಂಸ್ಕೃತ ಕಂಠಪಾಠ, ರಕ್ಷಾ ನಾಯ್ಕ,(ದ್ವಿತೀಯ).ಧಾರ್ಮಿಕ ಅರೇಬಿಕ್ ಪಠಣ,ವಿವೇಕಾನಂದ ರಾವತ (ದ್ವಿತೀಯ).ಕನ್ನಡ ಕಂಠಪಾಠ, ಸೌಮ್ಯ ನಾಯರ,(ತೃತೀಯ).ಕ್ಲೇ ಮಾಡಲಿಂಗ್,ರಿತೇಶ ಮಿರಾಶಿ,(ತೃತೀಯ).ಆಶು ಭಾಷಣ, ವಿವೇಕಾನಂದ ರಾವತ (ತೃತೀಯ).ಕವನ/ವಚನ/ಪದ್ಯವಾಚನ, ಸೌಮ್ಯ. ಎಸ್.ನಾಯರ್, (ತೃತೀಯ). ವಿದ್ಯಾರ್ಥಿಗಳ ಈ ಸಾಧನೆಗೆ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಹೆಚ್.ಬಾಗವಾನ,ಸಹ ಶಿಕ್ಷಕರಾದ ಮಂಜುನಾಥ ಕೂಟಬಾಗಿ,ಸಹ ಶಿಕ್ಷಕಿಯರಾದ ಅನಿಸ್ ಪಾತೀಮಾ,ನಾಗರತ್ನಾ ಮೋಗೇರ,ಸಂಜನಾ ಮಿರಾಶಿ ಹರ್ಷ ವ್ಯಕ್ತಪಡಿಸಿದ್ದಾರೆ. ಜೊತೆಯಲ್ಲಿ ತರಬೇತಿ ನೀಡಿದ ಶಿಕ್ಷಕರುಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರು,ಸರ್ವ ಸದಸ್ಯರು, ಪಾಲಕರು,ಪೋಷಕರು,ಧವಳೋ ಸಾವರ್ಕರ್ ಗ್ರಾ.ಪಂ.ಸದಸ್ಯರು ನಂದಿಗದ್ದೆ ಅಭಿನಂದನೆ ಸಲ್ಲಿಸಿದ್ದಾರೆ.
