ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಎಲ್ಲರ ಸಹಕಾರದಿಂದ ಅದ್ಧೂರಿಯಾಗಿ ಸಂಪನ್ನ ಗೊಂಡಿತು.
ಸಮಾರೋಪ ಹಾಗೂ ಪ್ರತಿಭಾ ಕಾರಂಜಿ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭವನ್ನು ಉದ್ದೇಶಿಸಿ ಅಭಿನಂದನಾ ನುಡಿಗಳನ್ನಾಡಿದ ರಾಮನಗರ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ (ಸಿ.ಆರ್.ಪಿ)ಬಾಗವಾನ ಸರ್ ರವರು ನಮ್ಮ ಕ್ಲಸ್ಟರಿನ ವ್ಯಾಪ್ತಿಯಲ್ಲಿ ನಡೆದ ಅತ್ತ್ಯುತ್ತಮ ಕಾರ್ಯಕ್ರಮವಾಗಿದ್ದು,ಅದನ್ನು ವರ್ಣಿಸಲು ಪದಗಳೇ ಸಾಲುತ್ತಿಲ್ಲ,ನಮ್ಮೆಲ್ಲರ ಅಪೇಕ್ಷೆಗಿಂತ ಹೆಚ್ಚಿನ ರೀತಿಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಉತ್ಸಾಹದಿಂದ, ಒಗ್ಗಟ್ಟಿನಿಂದ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಸಮೂಹ ಸಂಪನ್ಮೂಲ ಕೇಂದ್ರದ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಉಪಾಧ್ಯಕ್ಷರು,ಸರ್ವ ಸದಸ್ಯರು, ಊರಿನ ಎಲ್ಲಾ ವರ್ಗದ ಜನರು,ಹಳೆ ವಿದ್ಯಾರ್ಥಿಗಳು, ಗಣ್ಯರು,ಗ್ರಾಮ ಪಂಚಾಯತ ವತಿಯಿಂದ ವೇದಿಕೆ, ಮೆರವಣಿಗೆ, ಉಪಹಾರಗೃಹ,ಊಟೋಪಚಾರ,ಎಲ್ಲರನ್ನು ಗೌರವದಿಂದ ಸತ್ಕಾರ ಸಹಕಾರ ನೀಡಿದರ ಪರಿಣಾಮ,ಕಾರ್ಯಕ್ರಮದ ಅದ್ದೂರಿ ಸಂಪನ್ನದ ಯಶಸ್ಸು ಎಲ್ಲರಿಗೂ ಸಲ್ಲುತ್ತದೆ.ಕಾರ್ಯ ನಿಮಿತ್ತ ಅನುಪಸ್ಥಿತಿಯಲ್ಲಿರುವ ತಾಲೂಕಿನ ಕ್ರಿಯಾಶೀಲ,ಸದಾ ಶಿಕ್ಷಕರನ್ನು,ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಮನೋಭಾವದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಇಲಾಖೆಯ ಪರವಾಗಿ ಎಲ್ಲರಿಗೂ ಚಿರಋಣಿ ಎಂದು ಹೇಳಿದರು.
ಈ ಕಾರ್ಯಕ್ರಮದ ಮೊದಲು ಕಿರಿಯರ ಹಾಗೂ ಹಿರಿಯರ ವಿಭಾಗದ ವಿದ್ಯಾರ್ಥಿಗಳಿಗೆ ಕನ್ನಡ ಕಂಠಪಾಠ,ಇಂಗ್ಲಿಷ್ ಕಂಠಪಾಠ,ಧಾರ್ಮಿಕ ಪಠಣ ಸಂಸ್ಕೃತ,ಧಾರ್ಮಿಕ ಪಠಣ ಅರೇಬಿಕ್,ದೇಶಭಕ್ತಿಗೀತೆ,ಛದ್ಮವೇಷ, ಕಥೆ ಹೇಳುವುದು, ಚಿತ್ರಕಲೆ, ಅಭಿನಯ ಗೀತೆ,ಕ್ಲೇ ಮಾಡಲಿಂಗ್, ಭಕ್ತಿಗೀತೆ,ಆಶು ಭಾಷಣ ಸೇರಿದಂತೆ ಹಿರಿಯರ ವಿಭಾಗದ ವಿದ್ಯಾರ್ಥಿಗಳಿಗೆ ಹಿಂದಿ ಕಂಠಪಾಠ,ಮರಾಠಿ ಕಂಠಪಾಠ, ಪ್ರಬಂಧ ರಚನೆ,ಕವನ/ವಚನ/ಪದ್ಯವಾಚನ,ಮಿಮಿಕ್ರಿ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು. ಸ್ಪರ್ಧೆಗಳ ನಿರ್ಣಾಯಕರಾಗಿ ಅಸು ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿಯರಾದ ಗೀತಾಂಜಲಿ ಚವ್ಹಾಣ,ಪೂಜಾ ಚಾಂಬಾರ, ದೀಕ್ಷಿತಾ ಚೌಕುಳಕರ,ರಾಮನಗರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕಿಯರಾದ ಪೂರ್ಣಿಮಾ ನಾಯ್ಕ,ವೈಷ್ಣವಿ ಶಾನಭಾಗ, ಕರಂಬಾಳ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ರಾದ ರಘು ಪಟಗಾರ,ತಿನೈಘಾಟ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕರಾದ ಗುರುರಾಜ ಹೆಚ್, ಬಾಬು ಚವ್ಹಾಣ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪಾಯಸವಾಡಿ ಶಿಕ್ಷಕಿ ಕವಿತಾ ಗೌಳಿ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಿರಲವಾಡದ ಶಿಕ್ಷಕಿ ವೀಣಾ ಗೌಡ,ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾತ್ಲೇಗಾಳಿಯ ಶಿಕ್ಷಕಿ ಸುಜಾತಾ ದೇಸಾಯಿ ಸ್ಪರ್ಧೆಗಳ ಉತ್ತಮ ನಿರ್ಣಯವನ್ನು ನೀಡಲು ಸಹಕಾರ ನೀಡಿದರು. ಶಿಂದೋಳಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಿವೇದಿತಾ ಮಿರಾಶಿ,ನವಿತಾ ಶಿರೋಡಕರ, ಸುಪ್ರೀಯಾ ಶಿರೋಡಕರ,ಸಮರ್ಥ ಮಾಜಾಳಕರ ಹಾಗೂ ಇನ್ನಿತರ ವಿದ್ಯಾರ್ಥಿಗಳು,ಯುವಕರು,ಯುವತಿಯರು ಸ್ಪರ್ಧೆಗಳ ಆಯೋಜನೆಗೆ ಸಹಕಾರ ನೀಡಿದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗುರುನಾಥ ಮಾಜಾಳಕರ, ಉಪಾಧ್ಯಕ್ಷೆ ತನುಜಾ ಮಸರೂಕರ ಸದಸ್ಯರಾದ ವಾಸುದೇವ ಕಾಪೋಲಕರ,ತುಕಾರಾಮ ಠಾಕೂರ,ಗ್ರಾಮ ಪಂಚಾಯತ ಸದಸ್ಯರಾದ ನಾಗೇಶ ಕಾಪೋಲಕರ,ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್, ಕಾನೇಕರಲೇನ ಶಾಲೆಯ ಮುಖ್ಯ ಶಿಕ್ಷಕರಾದ ಸವಿತಾ ನಾಯಕ, ರಾಮನಗರ ಶಾಲೆಯ ವಿದ್ಯಾ ಮೇಡಂ,ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಕಾಂಬ್ಳೆ ಇನ್ನಿತರ ಗಣ್ಯರು ಬಹುಮಾನ ವಿತರಿಸಿದರು.ಈ ಸಂದರ್ಭದಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ತನು ಮನ ಧನದ ಸಹಕಾರ ನೀಡಿದ ದಾಂಡೇಲಿಯ ಉದ್ಯಮಿ ವಿಷ್ಣುಮೂರ್ತಿರಾವ್ ,ನಾಗರಾಜ ಸಾವಂತ,ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ವಿಜಯ ಪಂಡಿತ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರುತಿ ಪಾಟೀಲ್,ಪಿ ಡಿ ಓ ಅಮರೇಶ್ ರಾಠೋಡ್ ಹಾಗೂ ಅಸು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಟೇಶ ಕಾಂಬ್ಳೆ ಇವರನ್ನು ಶಾಲೆಯ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.ಶಿಂದೋಳಿ ಶಾಲೆಯ ಸಹ ಶಿಕ್ಷಕರಾದ ಆನಂದ ಪಿ,ರಾಮನಗರದ ಹನುಮಾನ ಲೇನ ಶಾಲೆಯ ಸಹ ಶಿಕ್ಷಕರಾದ ಮಂಜುನಾಥ ಕೊಟಬಾಗಿ ಸಹಕಾರ ನೀಡಿದರು. ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮಧ್ಯಾಹ್ನದ ಎಲ್ಲಾ ತರಹದ ವಸ್ತುಗಳನ್ನು,ಸರ್ವ ರುಚಿಗಳನ್ನು ಒಳಗೊಂಡ,ಬಾಳೆ ಎಲೆಯ ಮೇಲಿನ ಸಾವಯವ ಭೋಜನದ ವ್ಯವಸ್ಥೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರ ಬಾಯಲ್ಲಿ ಬಹುದಿನಗಳ ಕಾಲ ನೆನಪಿನಲ್ಲಿ ಉಳಿಯುವಂತೆ ಮಾಡಿತು.
ಕೊನೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಸರ್ವ ರೀತಿಯಲ್ಲಿಯೂ ಸಹಕಾರ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಶಿಂದೋಳಿ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡ ಸಲ್ಲಿಸಿದರು.
