ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಕ್ಲಸ್ಟರಿನ ಹನುಮಾನ ಲೇನ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ದಿನದ ಅಂಗವಾಗಿ ರಾಷ್ಟ್ರೀಯ ಶಿಕ್ಷಣ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ನಂದಿಗದ್ಡೆ ಗ್ರಾಮ ಪಂಚಾಯತ ಸದಸ್ಯ, ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ,ಸಿಆರ್.ಪಿ ಬಿ.ಹೆಚ್.ಬಾಗವಾನರವರು ದೇಶದ ಮೊದಲ ಪ್ರಧಾನಮಂತ್ರಿ ಪಂಡಿತ ಜವಹರಲಾಲ ನೆಹರುರವರ ಆಡಳಿತದ ಅವಧಿಯಲ್ಲಿ ಸ್ವತಂತ್ರ ಭಾರತದ ಮೊದಲ ಶಿಕ್ಷಣ ಮಂತ್ರಿಯಾಗಿ ಸೇವೆ ಸಲ್ಲಿಸಿದ ವ್ಯಕ್ತಿ ಮೌಲಾನ ಅಬ್ದುಲ್ ಕಲಾಂ ಆಜಾದ್ ರವರು ಎಂದು ಹೇಳಿದರು. ಬ್ರಿಟಿಷರ ಆಡಳಿತದ ಪರಿಣಾಮ ಹದಗೆಟ್ಟ ಶಿಕ್ಷಣ ವ್ಯವಸ್ಥೆಗೆ ರೂಪುರೇಷ ಕೊಟ್ಟ ಮಹಾನುಭಾವರು ಅಂತವರ ಜೀವನ ನಮ್ಮೆಲ್ಲರಿಗೆ ಆದರ್ಶ ಎಂದು ಹೇಳಿದರು. ಸಹ ಶಿಕ್ಷಕರಾದ ಮಂಜುನಾಥ ಕೂಟಬಾಗಿ ಮಾತನಾಡಿ ಭಾರತ ಶಿಕ್ಷಣ ಸಚಿವಾಲಯವು 2008 ರಲ್ಲಿ ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಜನ್ಮ ದಿನದ ಸವಿನೆನಪಿಗಾಗಿ ನವೆಂಬರ 11 ನೇ ದಿನಾಂಕದಂದು ರಾಷ್ಟ್ರೀಯ ಶಿಕ್ಷಣ ದಿನವೆಂದು ಆಚರಣೆಯನ್ನು ಮಾಡುತ್ತೇವೆ.ಮೌಲಾನ ಅಬ್ದುಲ್ ಕಲಾಂ ಆಜಾದ್ ಅವರ ಶಿಕ್ಷಣ ಕ್ಷೇತ್ರಕ್ಕೆಅನುಕರಣೀಯ ಕೊಡುಗೆಗಳು ಮತ್ತು ಸಂಸ್ಥೆಗಳ ನಿರ್ಮಾಣವು ದೇಶದ ಆಧುನಿಕ ವ್ಯವಸ್ಥೆಗೆ ದಾರಿ ಮಾಡಿಕೊಟ್ಟಿತು. ಸಹ ಶಿಕ್ಷಕಿಯಾದ ನಾಗರತ್ನಾ ಮೋಗೇರ ಮಾತನಾಡಿ ಮೌಲಾನ ಅಬ್ದುಲ್ ಕಲಾಂ ಆಜಾದ್ ರ ಸಂಕ್ಷಿಪ್ತ ಜೀವನ ಪರಿಚಯ,ಅವರ ಶಿಕ್ಷಣ ನೀತಿ, ಸಾಧನೆಗಳು, ಕೊಡುಗೆಗಳ ಬಗ್ಗೆ ಹೇಳಿದರು.ಸ್ವಾತಂತ್ರ್ಯ ಹೋರಾಟದ ಸಮಯದಲ್ಲೂ ಮುಂಚುಣಿಯಲ್ಲಿ ಇದ್ದರು. ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಕಾರ್ಯಕ್ರಮವನ್ನು ಉದ್ದೇಶಿಸಿ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ನಿಮಿತ್ತ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ,ನಾವು ಎಕೆ ಶಿಕ್ಷಿತರಾಗಬೇಕು?,ವಿದ್ಯಾರ್ಥಿಗಳಾಗಿ ಸಮಾಜದಲ್ಲಿ ನಮ್ಮ ಪಾತ್ರ,ಸಂಸ್ಕಾರಯುತ ಶಿಕ್ಷಣದ ಜೊತೆ ಸಮಾಜದಲ್ಲಿ ನಮ್ಮ ನಡತೆ ಹೇಗಿರಬೇಕು ಕುರಿತು ಮಾತನಾಡಿದರು.ಸಹ ಶಿಕ್ಷಕಿಯರಾದ ಅನಿಸ್ ಫಾತಿಮಾ,ಸಂಜನಾ ಮಿರಾಶಿ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.ಶಾಲೆಯ ಮುಖ್ಯ ಶಿಕ್ಷಕರಾದ,ಸಿ.ಆರ್.ಪಿ ಬಿ.ಹೆಚ್.ಬಾಗವಾನ ಸ್ವಾಗತಿಸಿ, ನಿರೂಪಿಸಿದರು.ಸಹ ಶಿಕ್ಷಕರಾದ ಮಂಜುನಾಥ ಕೂಟಬಾಗಿ ವಂದನೆ ಸಲ್ಲಿಸಿದರು.
