ಸುದ್ದಿ ಕನ್ನಡ ವಾರ್ತೆ
ಜೊಯಿಡಾತಾಲೂಕಿನ ಗ್ರಾಮೀಣ ಬಾಗಗಳಲ್ಲಿ ವಿವಿಧ ಮೂಲ ಭೂತ ಸೌಲಭ್ಯ ಕ್ಕೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಇಂದು ಜೊಯಿಡಾ ತಹಶಿಲ್ದಾರ ಕಚೇರಿ ವರೆಗೆ ಪಾದಯಾತ್ರೆ ಆರಂಭ ವಾಗಿದೆ ಕಿರವತ್ತಿಯಿಂದ ಈ ಪಾದಯಾತ್ರೆ ಪ್ರಾರಂಭವಾಗಿದೆ.
11 ಕಿ.ಮಿ ಪಾದಯಾತ್ರೆ ನಡೆದು ನಂತರ ಹಗಲು ರಾತ್ರಿ ನಿರಂತರ ಹೋರಾಟ ನಡೆಯಲಿದೆ.
ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಪ್ರೇಮಾನಂದ ವೇಳಿಪ ಪಾದಯಾತ್ರೆ ಗೆ ಚಾಲನೆ ನೀಡಿದರು.
ನೂರಾರು ಜನರು ಪಾದಯಾತ್ರೆ ಯಲ್ಲಿ ಭಾಗಿಯಾಗಿದ್ದಾರೆ
ರಸ್ತೆಯ ಮಧ್ಯೆ ಹಲವರು ಅಲ್ಲಲ್ಲಿ ಪಾದಯಾತ್ರೆ ಯಲ್ಲಿ ಸೇರಿಕೊಂಡು ಭಾಗವಹಿಸುತ್ತಿದ್ದಾರೆ.
ರಸ್ತೆ, ಸೇತುವೆ, ವಿದ್ಯುತ್, ಬಸ್ ಸೌಲಭ್ಯ ಕ್ಕೆ ಅಗ್ರಹಿಸಿ ಸತ್ಯಾಗ್ರಹ ನಡೆಯುತ್ತಿದೆ
ಮಧ್ಯಾಹ್ನ 1 ಗಂ ಗೆ ಜೊಯಿಡಾ ತಹಶಿಲ್ದಾರ ಕಚೇರಿಗೆ ತಲುಪಲಿರುವ ಪಾದಯಾತ್ರೆ
