ಸುದ್ದಿ ಕನ್ನಡ ವಾರ್ತೆ
. ಜೋಯಿಡಾರ:ತಾಲೂಕಿನ ನಂದಿಗದ್ಡೆ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಕನಕದಾಸರ ಜಯಂತ್ಯುತ್ಸವವನ್ನು ಶೃದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಕೀರ್ತನಕಾರರು,ಹರಿದಾಸರು,ಸಂತಕವಿ ಕನಕದಾಸರ ಭಾವಚಿತ್ರಕ್ಕೆ ಗ್ರಾಮ ಪಂಚಾಯತ ಉಪಾಧ್ಯಕ್ಷೆ ದಾಕ್ಷಾಯಣಿ ದಾನಶೂರ, ಸದಸ್ಯರಾದ ಧವಳೋ ಗಣೇಶ ಸಾವರ್ಕರ್,ಗ್ರಾಮ ಪಂಚಾಯತ ಸಿಬ್ಬಂದಿಗಳಾದ ಮನವೆಲ್ ಎಫ್, ನಾರಾಯಣ ಬಾಂದೇಕರ, ಪರಮೇಶ್ವರ ಸಿದ್ದಿ,ಪುಲೋರಿನ ಗೋಮ್ಸ,ಕ್ಲೇವನ್ ಎಫ್,ರಾಹುಲ ವಾಜ್,ಅಂಗನವಾಡಿ ಕಾರ್ಯಕರ್ತೆ ಜೋಸಿನಾ ಎಫ್ ಪುಷ್ಪ ನಮನ ಸಲ್ಲಿಸಿದರು.
