ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ಜಿಲ್ಲಾ ಪಂಚಾಯತ ಉತ್ತರಕನ್ನಡ,ಶಾಲಾ ಶಿಕ್ಷಣ ಇಲಾಖೆ,ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜೋಯಿಡಾ,ಕ್ಷೇತ್ರ ಸಂಪನ್ಮೂಲ ಕೇಂದ್ರ ಜೋಯಿಡಾ,ಶೈಕ್ಷಣಿಕ ಜಿಲ್ಲೆ ಶಿರಸಿ(ಉ.ಕ), ಸಮೂಹ ಸಂಪನ್ಮೂಲ ಕೇಂದ್ರ ಅನಮೋಡ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ,ಮಾರಸಂಗಳ ಇವರ ಸಹಯೋಗದೊಂದಿಗೆ ನಾಗೋಡಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ 2025-26 ರ ಕಾರ್ಯಕ್ರಮ ದಿನಾಂಕ:07-11-2025 ರ ಶುಕ್ರವಾರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾರಸಂಗಳ ನಲ್ಲಿ ಅದ್ಧೂರಿಯಾಗಿ ನಡೆಯಿತು.

ಕಾರ್ಯಕ್ರಮವನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಗಂಗಾರಾಮ ಗವಳಿ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಸದಸ್ಯರಾದ ಬಾಜಿರಾವ್ ಜಾದವ, ಶಂಕರ ಗಾವಡಾ,ಶಿವಾಜಿ ಗಾವಡಾ, ರಾಜಾರಾಮ ಗಾವಡಾ,ದತ್ತಾ ಗಾವಡಾ,ನಾಮದೇವ ಗಾವಡಾ, ರಾಮನಾಥ ಗಾವಡಾ,ಗೋಪಾಲ ಹಣಬರ,ಶಾಲೆಯ ಮುಖ್ಯ ಶಿಕ್ಷಕಿ ಪಲ್ಲವಿ ಬಾಂದೇಕರ,ಅನಮೋಡ ಕ್ಲಸ್ಟರ್ ಸಿ.ಆರ್.ಪಿ ಬಿ. ಹೆಚ್. ಬಾಗವಾನ್ ,ಬಾಬು ಚೌಹಾಣ ಸರಕಾರಿ ಪ್ರೌಢಶಾಲೆ ತಿನೈಘಾಟ, ಜಿ.ಬಿ.ಲಮಾಣಿ ಸರಕಾರಿ ಪ್ರೌಢಶಾಲೆ ಶಿಕ್ಷಕರು, ಎಸ್.ಡಿ.ಅಂಕೋಲೆಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತಿನೈಘಾಟ, ಎಸ್ ಡಿ.ಎಮ್.ಸಿ ಸದಸ್ಯರು ಇದ್ದರು. ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಥೆ ಹೇಳುವುದು,ಕಂಠಪಾಠ,ಧಾರ್ಮಿಕ ಪಠಣ,ಚಿತ್ರಕಲೆ,ಕ್ಲೇ ಮಾಡೆಲಿಂಗ್, ಅಭಿನಯ ಗೀತೆ,ದೇಶ ಭಕ್ತಿಗೀತೆ, ಭಕ್ತಿ ಗೀತೆ,ಛದ್ಮವೇಷ,ಕವನ ವಾಚನ,ಪ್ರಬಂಧ ಸ್ಪರ್ಧೆ, ಮಿಮಿಕ್ರಿ,ಆಶು ಭಾಷಣ ಇನ್ನಿತರ ಸ್ಪರ್ಧೆಗಳಲ್ಲಿ ಕ್ಲಸ್ಟರಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ಗಣ್ಯರು ವಿತರಿಸಿದರು. ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಅನಮೋಡ ಶಾಲೆಯ ನಿವೃತ್ತ ಶಿಕ್ಷಕರಾದ ವಾಯ್.ಕೆ.ನಾಟಿಕಾರ ಹಾಗೂ ಸಿ.ಆರ್.ಪಿ ಬಿ.ಹೆಚ್ ಬಾಗವಾನ್ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು.ಸಂಘಟಕರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿ ಉತ್ತಮ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು,

ಪಾಲಕರು,ಪೋಷಕರು ಸಹಕಾರ ನೀಡಿದರು.ಒಟ್ಟಿನಲ್ಲಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಸಿ.ಆರ್.ಪಿ ಬಿ.ಹೆಚ್.ಬಾಗವಾನ್ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ ಸಂದರ್ಭೋಚಿತವಾಗಿ ಮಾತನಾಡಿದರು.ಶಾಲೆಯ ಮುಖ್ಯಶಿಕ್ಷಕಿಯಾದ ಪಲ್ಲವಿ ಬಾಂದೇಕರ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.