ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಹಾಗೂ ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮ ಪಂಚಾಯತದ ಹಳ್ಳಿಗಳಲ್ಲಿ ಸಡಗರ, ಸಂಭ್ರಮದಿಂದ ತುಳಸಿ ವಿವಾಹ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊಂಡಿತು.
ಕೆಲವರು ದ್ವಾದಶಿಯ ದಿನ ತುಳಸಿ ವಿವಾಹದ ಹಬ್ಬ ಮಾಡಿದರೆ, ಉಳಿದವರು ಹುಣ್ಣಿಮೆಯ ದಿನ ಮಾಡುತ್ತಾರೆ.ಈ ದಿನ ತಮ್ಮ ,ತಮ್ಮ ಮನೆಯ ಮುಂದಿರುವ ತುಳಸಿ ಕಟ್ಟೆಯನ್ನು ಬಣ್ಣಗಳಿಂದ ಶೃಂಗರಿಸಿ,ಬಾಳೆ ಗಿಡ, ಬಾಳೆ ಗಿಡದ ದಿಂಡನ್ನು ಉಪಯೋಗಿಸಿ ಮಂಟಪ ಮಾಡುತ್ತಾರೆ.ಕಬ್ಬನ್ನು ಮಂಟಪಕ್ಕೆ ಕಟ್ಟಲಾಗುತ್ತದೆ.ತುಳಸಿ ಕಟ್ಟೆಯನ್ನು ರಂಗೋಲಿ,ಹೂವು ಹಾಗೂ ಮಾವಿನ ಎಲೆಗಳಿಂದ ಅಲಂಕರಿಸಿ,ಶ್ರೀಕೃಷ್ಣನ ಮೂರ್ತಿಯನ್ನರಿಸಿ ಪೂಜಿಸಲಾಗುತ್ತದೆ.ದೀಪಗಳಿಂದ ಬೃಂದಾವನವನ್ನು ಅಲಂಕರಿಸಲಾಗುತ್ತದೆ.ಕೆಲವು ಕಡೆ ಪುರೋಹಿತರನ್ನು ಕರೆದು ವಿವಾಹ ಕಾರ್ಯಕ್ರಮ ಮಾಡುತ್ತಾರೆ.
ಉಳಿದವರು ತಮ್ಮ- ತಮ್ಮ ಸಂಪ್ರದಾಯ,ಪದ್ಧತಿಯ ಅನುಗುಣವಾಗಿ ತುಳಸಿ ವಿವಾಹ ಕಾರ್ಯಕ್ರಮ ಮಾಡುತ್ತಾರೆ. ತುಳಸಿ ವಿವಾಹದ ಪೂಜಾ ಕಾರ್ಯಕ್ರಮಗಳು ಮುಗಿದ ನಂತರ ತೀರ್ಥ ,ಪ್ರಸಾದ ವಿತರಣೆ.ಅನ್ನಪ್ರಸಾದದ ವ್ಯವಸ್ಥೆ ಇರುತ್ತದೆ.
ತಾಲೂಕಿನ ವಿವಿಧ ಕಡೆ ತುಳಸಿ ವಿವಾಹ ಕಾರ್ಯಕ್ರಮದ ನಿಮಿತ್ತ, ಸಾಂಸ್ಕೃತಿಕ ಸಂಜೆ ಹಾಗೂ ಮನೋರಂಜನನಾ ಕಾರ್ಯಕ್ರಮಗಳು ನಡೆಯುತ್ತವೆ.ಇನ್ನೂ ಅನೇಕ ಕಡೆ ಮರಾಠಿ ಪೌರಾಣಿಕ ಖೇಲ್ ಪ್ರದರ್ಶನ,ಇನ್ನಿತರ ಕಾರ್ಯಕ್ರಮಗಳು ನಡೆಯುತ್ತವೆ.ಎಲ್ಲರೂ ಭಕ್ತಿ ಭಾವದಿಂದ ತುಳಸಿ ಮಾತೆಯನ್ನು ಶೃದ್ದಾ ಭಕ್ತಿಯಿಂದ ಪೂಜಿಸಿ ಭಕ್ತಿ ಭಾವದಿಂದ ಎಲ್ಲರೂ ವಿಶೇಷವಾಗಿ ವಿವಾಹಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಈಡೇರಿಸುವಂತೆ, ತಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ಬೇಡಿಕೊಳ್ಳುತ್ತಾರೆ. ಕಾತೇಲಿ(ಕುಂಬಾರವಾಡಾ)ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯಾ ಗ್ರಾಮದ ಡೇರೆಕರ ಕುಟುಂಬದವರು ಒಂದೇ ಕಡೆ ದೇವರ ಮನೆಯ ತುಳಸಿ ಕಟ್ಟೆಯ ವಿವಾಹ ಕಾರ್ಯಕ್ರಮದಲ್ಲಿ ಸಡಗರ ಸಂಭ್ರಮದಿಂದ ಪಾಲ್ಗೊಂಡಿದ್ದ ಚಿತ್ರ.
