ಸುದ್ದಿ ಕನ್ನಡ ವಾರ್ತೆ

. ಯಲ್ಲಾಪುರ:ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ಆಗಮಿಸಿದ ಪರ್ತಗಾಳಿ ಜಿವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜಿವೋತ್ತಮ ಮಠವು ಸ್ಥಾಪನೆಯಾಗಿ 550 ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಸಂಸ್ಥಾನದ ಆರಾಧ್ಯ ದೇವ
ರಾದ ಶ್ರೀರಾಮ ದೇವರ 77 ಅಡಿ ಎತ್ತರದ ಕಂಚಿನ ಪ್ರತಿಮೆ ಪರ್ತಗಾಳಿಯಲ್ಲಿ ಅನಾವರಣಗೊಳ್ಳಲಿದೆ. ಈ ಹಿನ್ನಲೆ ಯಲ್ಲಿ ಬದರಿಕಾಶ್ರಮದಿಂದ ಹೊರಟ ಪರ್ತಗಾಳಿ ಜಿವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥವು ಹಲವು ರಾಜ್ಯಗಳನ್ನು ಸಂಚರಿಸಿ,ಮಂಗಳವಾರ ಸಂಜೆ ಯಲ್ಲಾಪುರಕ್ಕೆ ಆಗಮಿಸಿದ ರಥಕ್ಕೆ ಗ್ರಾಮದೇವಿ ದೇವಸ್ಥಾನದಲ್ಲಿ ಪೂರ್ಣ ಕುಂಭದೊಂದಿಗೆ ಬರಮಾಡಿಕೊಂಡು,ಚಂಡೆವಾದ್ಯಗಳೊಂದಿಗೆ ಸಿಡಿಮದ್ದು ಸಿಡಿಸಿ ಸಂಭ್ರಮಿಸುತ್ತಾ ಮೆರವಣಿಗೆಯ ಮೂಲಕ ವೆಂಕಟರಮಣ ಮಠದ ವರೆಗೆ ಭವ್ಯ ಮೆರವಣಿಗೆ ನಡೆಯಿತು.

ದೀಪಾಲಂಕಾರದಿಂದ ಶೋಭಿತ ಈ ರಥದಲ್ಲಿ ಶ್ರೀರಾಮ,ಲಕ್ಷ್ಮಣ ಸೀತಾಮಾತೆ ಹಾಗೂ ರಾಮ ಭಕ್ತ ಹನುಮಾನ ಪ್ರತಿಮೆಗಳಿದ್ದು ವಿಶೇಷ ಪೂಜೆ,ಮಂಗಳಾರತಿ ನಡೆಯಿತು. ಪ್ರಮುಖರಾದ ಬಾಲಕೃಷ್ಣ ನಾಯಕ, ಸುಬ್ರಾಯ ಪೈ,ನಾರಾಯಣ ಭಟ್ಟ,ಅನಂತ ಭಟ್ಟ,ನಂದನ ಬಾಳಗಿ,ರವಿ ಶಾನಭಾಗ,ರಾಜನ ಬಾಳಗಿ,ಗಜಾನನ ನಾಯ್ಕ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಾತೆಯರು,ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.