ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ನಂದಿಗದ್ದೆ ಗ್ರಾಮ ಪಂಚಾಯತ ವ್ಯಾಪ್ತಿಯ ಅವುರ್ಲಿ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಅಂಗನವಾಡಿ, ಶಾಲಾ,ಕಾಲೇಜಿನ ವಿದ್ಯಾರ್ಥಿಗಳಿಗೆ,ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಪಠ್ಯ,ಪಠ್ಯೇತರ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಂದಿಗದ್ದೆ ಗ್ರಾಮ ಪಂಚಾಯತ ಸದಸ್ಯರಾದ ಧವಳೋ ಗಣೇಶ ಸಾವರ್ಕರ್ ಮಾತನಾಡಿ ನಾವೆಲ್ಲರೂ ಪ್ರಕೃತಿಯ ಆರಾಧಕರು,ಸುತ್ತಮುತ್ತಲಿನ ಪರಿಸರದಲ್ಲಿನ ಗಿಡ,ಮರ, ಬಳ್ಳಿ, ಕಲ್ಲು,ಹಳ್ಳ,ಕೊಳ್ಳ ನದಿಯ ನೀರನ್ನು ದೇವರೆಂದು ಪೂಜಿಸುವವರು.

ಇಂತಹ ಸ್ವಚ್ಛ ಸುಂದರ ಪರಿಸರವನ್ನು ಮಂದಿನ ಭವಿಷ್ಯದ ಪೀಳಿಗೆಯ ದೃಷ್ಟಿಯಿಂದ ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಪರಿಸರ ಅಭಿವೃದ್ಧಿ ಸಮಿತಿಯವರು ಹಾಗೂ ಅರಣ್ಯ ಇಲಾಖೆಯವರು ಜೊತೆಯಾಗಿ ಸತತವಾಗಿ ಕಳೆದ 8 ವರ್ಷಗಳಿಂದ ಅಂಗನವಾಡಿ, ಶಾಲಾ,ಕಾಲೇಜಿನ ವಿದ್ಯಾರ್ಥಿಗಳಿಗೆ ಪಠ್ಯ,ಪಠ್ಯೇತರ ಸಾಮಗ್ರಿಗಳನ್ನು ನೀಡಿ, ಇಂದಿನ ಮುಂದುವರೆದ ಯಗದಲ್ಲಿ ಅತೀ ಅವಶ್ಯಕವಾದ ಉತ್ತಮ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು. ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಅರಣ್ಯ ಇಲಾಖೆಯವರು ನೀಡಿದ ಪಠ್ಯ,ಪಠ್ಯೇತರ ಸಾಮಗ್ರಿಗಳ ಸದುಪಯೋಗ ಮಾಡಿಕೊಂಡು, ಶಾಲೆಯ,ಪಾಲಕರ,ಊರಿಗೆ ಕೀರ್ತಿಯನ್ನು ತನ್ನಿ ಎಂದರು. ಈ ಹಿಂದೆ ಕರ್ನಾಟಕ ರಾಜ್ಯದಲ್ಲಿಯೇ ಅತ್ಯುತ್ತಮ ಪರಿಸರ ಅಭಿವೃದ್ಧಿ ಸಮಿತಿ ಎಂಬ ಮುಖ್ಯಮಂತ್ರಿಗಳ ಪ್ರಶಸ್ತಿ ಪುರಸ್ಕೃತ ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಅರಣ್ಯ ಇಲಾಖೆಯವರು ಸಹಯೋಗದಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ತಮ ಕಾರ್ಯಗಳನ್ನು ಮಾಡಿ ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾದ ಫಣಸೋಲಿ ವಲಯ ಅರಣ್ಯ ಅಧಿಕಾರಿಗಳಾದ ರವಿಕಿರಣ ಸಂಪಗಾವಿ ಮಾತನಾಡಿ ಅವುರ್ಲಿ ಗ್ರಾಮಸ್ಥರು ಇಲಾಖೆಯ ಜೊತೆ ಉತ್ತಮ ಸಹಕಾರ ನೀಡುತ್ತಿದ್ದಾರೆ.ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿಯವರು ಪರಿಸರ ಸಂರಕ್ಷಣೆಯ ಜೊತೆಗೆ ಶಿಕ್ಷಣಕ್ಕೆ ಮಹತ್ವ ನೀಡುತ್ತಿರುವುದು ಒಳ್ಳೇಯ ಕೆಲಸ.ಈ ಹಿಂದೆ ಪರಿಸರ ಅಭಿವೃದ್ಧಿ ಸಮಿತಿಗೆ ಮುಖ್ಯ ಮಂತ್ರಿಗಳ ಪ್ರಶಸ್ತಿ ಪಡೆದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ಮುಂದಿನ ದಿನಗಳಲ್ಲಿ ಪರಿಸರ ಅಭಿವೃದ್ಧಿ ಸಮಿತಿ ಹಾಗೂ ಅರಣ್ಯ ಇಲಾಖೆಯವರು ಜೊತೆಗೂಡಿ ಇನ್ನೂ ಉತ್ತಮ ಕೆಲಸಗಳನ್ನು ಮಾಡಿ ಎಲ್ಲರಿಗೆ ಮಾದರಿಯಾಗೋಣ ಎಂದು ಹೇಳಿದರು.

ವೇದಿಕೆಯ ಕಾರ್ಯಕ್ರಮದಲ್ಲಿ ಅವುರ್ಲಿ ಪರಿಸರ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಘವೇಂದ್ರ ನಾಯ್ಕ,ಉಪವಲಯ ಅರಣ್ಯಅಧಿಕಾರಿಗಳಾದ,ಪರಿಸರ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಶಾಂತಾರಾಮ, ವನಪಾಲಕ ರೇವಣ ಸಿದ್ಧ ಕೆ,ಅವುರ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಸೋಮಣ್ಣ ವೇಳಿಪ ಇದ್ದರು.ಕಾರ್ಯಕ್ರಮದಲ್ಲಿ ಅವುರ್ಲಿ ಶಾಲೆಯ ಅತಿಥಿ ಶಿಕ್ಷಕರಾದ ರತ್ನಾಕರ ತೆಲೋಲಿಕರ ಸ್ವಾಗತಿಸಿ, ನಿರೂಪಿಸಿ,ವಂದಿಸಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಗಜಾನನ ದೇವದಾಸ, ಸದಸ್ಯರಾದ ಗಣೇಶ ವೇಳಿಪ, ಗಜಾನನ ವೇಳಿಪ,ಸದಾನಂದ ದೇವದಾಸ, ಬಾಲಚಂದ್ರ ವೇಳಿಪ,ಮಹಾಬಳೇಶ್ವರ ದೇವದಾಸ,ಕಿರಣ ಶೇಟಕರ,ಶಾಲೆಯ ಹಳೆಯ ವಿದ್ಯಾರ್ಥಿಗಳು,ಇನ್ನಿತರ ಪಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.