ಸುದ್ದಿ ಕನ್ನಡ ವಾರ್ತೆ
ದಾಂಡೇಲಿ :ನಗರದ ಶ್ರೀ ಲಕ್ಷ್ಮೀ ನಾರಾಯಣ ವೆಂಕಟರಮಣ ದೇವಸ್ಥಾನದಲ್ಲಿ 550 ಕೋಟಿ ಶ್ರೀ ರಾಮ ನಾಮ ಜಪ ಅಭಿಯಾನ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ರಾಮ ದಿಗ್ವಿಜಯ ರಥವನ್ನು ಬರಮಾಡಿಕೊಂಡು ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ವತಿಯಿಂದ ಪೂರ್ಣ ಕುಂಭದೊಂದಿಗೆ ಭವ್ಯ ಮೆರವಣಿಗೆಯಲ್ಲಿ ಶಿವಾಜಿ ವೃತ್ತದಿಂದ ವೆಂಕಟರಮಣ ದೇವಸ್ಥಾನದವರೆಗೆ ಕರೆತರಲಾಯಿತು.
ದೇವಸ್ಥಾನದಲ್ಲಿ ರಥಾರೂಢ ಶ್ರೀ ರಾಮದೇವರನ್ನು ವಿಶೇಷ ಪೂಜೆ ಸಲ್ಲಿಸಿ ನೂರಾರು ಸಮಾಜ ಬಾಂಧವರು ರಾಮದೇವರ ಕೃಪೆಗೆ ಪಾತ್ರರಾದರು.
