ಸುದ್ಧಿಕನ್ನಡ ವಾರ್ತೆ

ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಲಕ್ಷ್ಮೀ ನಾರಾಯಣ ಭಟ್ ರವರನ್ನು ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಬೆಳ್ಳಿಪಾಲ್ ವಾರ್ಷಿಕೋತ್ಸವ ಸಂದರ್ಭದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ದಿವ್ಯಾಶೀರ್ವಾದಗಳೊಂದಿಗೆ ಸನ್ಮಾನಿಸಿದರು.

ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಮಹಾಬಲೇಶ್ವರ ಭಟ್ ಸೂತ್ರೆ ರವರ ಮಗನಾಗಿ 1970 ರಲ್ಲಿ ಲಕ್ಷ್ಮೀನಾರಾಯಣ ಭಟ್ ರವರು ಜನಿಸಿದರು. 1992 ರಲ್ಲಿ ಶ್ರೀ ಸೋಂದಾ ಮಠದ ಸೇವಾ ಕಾರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡು ಸೋಂದಾ ಶ್ರೀಗಳ ವಾಹನ ಚಾಲಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಶ್ರೀಗಳ ಅಗತ್ಯವನ್ನು ಅರಿತು ವಾಹನ ಚಲಿಸುವ ವೃತ್ತಿಪರತೆಯನ್ನು ಗುರುತಿಸಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮೀತಿ ಸನ್ಮಾನಿಸಿದೆ.

ಶ್ರೀಮಠದ ಸಮಸ್ತ ಭಕ್ತರ ಮೆಚ್ಚುಗೆಯ ಪಾರಿತೋಷಕವನ್ನು ತಾವು ಗಳಿಸಿದ್ದೀರಿ. ಶ್ರೀಮಠದ ಸಮಸ್ತ ಭಕ್ತರ ಪ್ರೀತಿಯನ್ನು ಗಳಿಸಿದ ತಾವು ಶ್ರೀಗಳ ವಾಹನ ಚಾಲಕರಾಗಿಯೂ, ಸಂಸ್ಥಾನದ ಸಕಲ ಕಾರ್ಯಗಳಲ್ಲಿ ಸಹಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ, ಸಂಸ್ಥಾನದ ಸಕಲ ಕಾರ್ಯಗಳಲ್ಲಿಯೂ ಸಹಕಾರಿಯಾಗಿ ಕರ್ತವ್ಯ ನಿರ್ವಹಿಸುವ ತಮ್ಮ ಸೇವಾಪರತೆಯನ್ನು ಗುರುತಿಸಿ ಗೌರವಿಸುತ್ತಿರುವುದಾಗಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನ ಸಮೀತಿ ಸನ್ಮಾನ ಪತ್ರ ನೀಡಿ ಗೌರವಿಸಲಾಗಿದೆ.