ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಶ್ರೀ ಶ್ರೀ ಗ್ರಾಮದೇವಿ ದೇವಸ್ಥಾನ ಯಲ್ಲಾಪುರ ಶ್ರೀದೇವಿಯರಿಗೆ ಸ್ವರ್ಣ ಕಿರೀಟ ಸಮರ್ಪಣೆ ಕಾರ್ಯಕ್ರಮ. ಫೆಬ್ರುವರಿ 21ರಂದು ಶುಕ್ರವಾರ ನಡೆಯಲಿದೆ.
ಫೆಬ್ರುವರಿ 21ರಂದು ಬೆಳಿಗ್ಗೆ ಪಂಚಗವ್ಯವನ ,ಪ್ರಧಾನ ಸಂಕಲ್ಪ ,ಗಣಪತಿ ಪೂಜೆ ,ಕ್ಷೇತ್ರ ಪಾಲ ಪ್ರಾರ್ಥನೆ, ಪುಣ್ಯಾಹ ವಾಚನ ,ಋತ್ವಿಕ್ ವರ್ಣನ ಮಧುಪರ್ಕ, ಪೂಜೆ ಹಾಗೂ ಸಪ್ತಶತಿ ಪಾರಾಯಣ ಕಾರ್ಯಕ್ರಮ ಜರುಗಲಿದೆ.
ಇಂದು ಸಂಜೆ ಯಾಗ ಶಾಲಾ ಪ್ರವೇಶ ,ಕೆಲಸ ಸ್ಥಾಪನೆ, ಕಲ್ಪೋಕ್ತ ಪೂಜೆ ,ನವ ಅಕ್ಷರಿ ಜಪ ಕಾರ್ಯಕ್ರಮ ಜರುಗಲಿದೆ. ಪದ್ಮಶ್ರೀ ಪಂಡಿತ ವೆಂಕಟೇಶ ಕುಮಾರ ಧಾರವಾಡ ಇವರಿಂದ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಫೆಬ್ರುವರಿ 22ರಂದು ಶನಿವಾರ ಬೆಳಿಗ್ಗೆ ಚಂಡಿಪಾರಾಯಣ ,ಸಂಜೆ ಕುಂಡ ಸಂಸ್ಕಾರ, ಅಗ್ನಿ ಜನನ ನವಾಕ್ಷರಿ ಹವನ, ಯೋಗಿನಿ ಬಲಿ, ದಿಕ್ಪಾಲ ಬಲಿ ಕಾರ್ಯಕ್ರಮ ಜರುಗಲಿದೆ.
ಫೆಬ್ರುವರಿ 23 ರಂದು ರವಿವಾರ ಬೆಳಿಗ್ಗೆ ಗಣೇಶ ಪೂಜೆ , ಪುಣ್ಯಾಹ ವಾಚನ,ನವಗ್ರಹ ಹೋಮ ಭುವನೇಶ್ವರಿ ಮೂಲ ಮಂತ್ರ ಹವನ ಪರಿವಾರ ದೇವತಾ ಹವನ ಬೆಳಿಗ್ಗೆ 10 ಗಂಟೆಗೆ ಪೂರ್ಣಾವತಿ ಮಹಾಪೂಜೆ ಮಂಗಳಾರತಿ ತೀರ್ಥ ಪ್ರಸಾದ್ ವಿತರಣೆ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12:30 ರಿಂದ 3 ಗಂಟೆವರೆಗೆ ಶ್ರೀ ಗ್ರಾಮದೇವಿ ನೈವೇದ್ಯ ಅನ್ನಸಾರ್ಪಣೆ ಕಾರ್ಯಕ್ರಮ ಜರುಗಲಿದೆ.
ಅಂದು ಸಂಜೆ 7:00 ಯಿಂದ ಶ್ರೀ ವೀರಾಂಜನೇಯ ಲಕ್ಷಮಿತ್ರ ಮಂಡಳ ಬಂಗಾರಮಕ್ಕಿ ಗೆರಸೋಪ್ಪ ಹೊನ್ನಾವರ ಇವರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗ ನಡೆಯಲಿದೆ.
ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.