ಸುದ್ದಿ ಕನ್ನಡ ವಾರ್ತೆ

ಜೋಯಿಡಾದ ಪಣಸೋಲಿ ಯಲ್ಲೂ ರಾಜಾರಾಮ ದೇಸಾಯಿ ನೇತೃತ್ವದಲ್ಲ ಹದಗೆಟ್ಟ ರಸ್ತೆಗೆ ಮಣ್ಣು ಹಾಕಿದರು
ತಾಲೂಕಿನಬೈಲಪಾರ ಜನತಾಕಾಲೋನಿ ಮತ್ತು ಫಣಸೋಲಿ ನಡುವಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೊಂಡಮಯವಾಗಿದ್ದರಿಂದ, ಊರಿನ ಮುಖಂಡರಾದ ರಾಜಾರಾಮ ದೇಸಾಯಿ ಅವರ ನೇತೃತ್ವದಲ್ಲಿ ಸ್ಥಳೀಯ ಯುವಕರು ಶ್ರಮದಾನದ ಮೂಲಕ ರಸ್ತೆ ಹೊಂಡಗಳನ್ನು ಮುಚ್ಚುವ ಕಾರ್ಯ ನಡೆಸಿದರು.

ದಾಂಡೇಲಿಯಿಂದ ಫಣಸೋಲಿಗೆ ಸಂಪರ್ಕ ಕಲ್ಪಿಸುವ ಈ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡಗಳು ಬಿದ್ದಿದ್ದು, ಸಾರ್ವಜನಿಕರ ಹಾಗೂ ವಾಹನ ಸವಾರರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿತ್ತು. ನಿತ್ಯವೂ ವಿದ್ಯಾರ್ಥಿಗಳು,ಪ್ರಯಾಣಿಕರು ಅನುಭವಿಸುತ್ತಿದ್ದ ಈ ಸಂಕಷ್ಟವನ್ನು ಗಮನಿಸಿದ ಯುವಕರ ತಂಡ, ತಾವೇ ಮುಂದೆ ನಿಂತು ಜೆಸಿಬಿ ಯನ್ನು ಸ್ವಂತ ಖರ್ಚಿನಲ್ಲಿ ಹಾಕಿ ,ರಸ್ತೆ ಇಕ್ಕೆಲಗಳನ್ನು ಸ್ವಚ್ಚಗೊಳಿಸಿ, ರಸ್ತೆಯ ಗುಂಡಿಗಳಿಗೆ ಮಣ್ಣು ತುಂಬುವ ಮೂಲಕ ತಾತ್ಕಾಲಿಕವಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು .

ಯುವಕರ ಈ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಆದಷ್ಟು ಬೇಗ ಈ ರಸ್ತೆಗೆ ಶಾಶ್ವತ ದುರಸ್ತಿ ಕಾರ್ಯ ಕೈಗೊಂಡು ಡಾಂಬರೀಕರಣ ಮಾಡುವಂತೆ ಗ್ರಾಮಸ್ಥರು ಹಾಗೂ ಯುವಕರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ತಾಲೂಕಿನ ಗ್ರಾಮೀಣ ಭಾಗಗಳ ರಸ್ತೆ ಸ್ಥಿತಿ ಅಧೋಗತಿ ಯಾಗಿದ್ದು ರಾಜಕಾರಣಿ ಗಳು ಈ ಬಗ್ಗೆ ಎಲ್ಲೂ ಮಾತಾಡದೆ ಮುಂದಿನ ಚುನಾವಣೆ ಬಗ್ಗೆ ಚಿಂತನೆ ನಡೆಸಿರುವುದು ತಾಲೂಕಿನ ದೌರ್ಬಾಗ್ಯವೇ ಸರಿ.