ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಕೊಡ್ಲಗಡ್ಡೆ ಭಾಗದಲ್ಲಿ ಇಂದು ಬೆಳಂ ಬೆಳಗ್ಗೆ ವಿಮಾನಿಕ ಸಮೀಕ್ಷೆ ಮುಂದುವರೆದಿದೆ. ಬೆಳಿಗ್ಗೆ ಮೂರು ಸುತ್ತು ವಿಮಾನ ಹಾರಾಟ ನಡೆಸಿದೆ. ದಿನವಿಡಿ ವಿಮಾನ ಹಾರಾಟ ಮುಂದುವರೆಯುವುದು ಕೊಡ್ಲಗಡ್ಡೆ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ.
ಇದು ಖನಿಜ ಸಂಪನ್ಮೂಲಗಳ ವೈಮಾನಿಕ ಸಮೀಕ್ಷೆ ಎಂದು ಹೇಳಲಾಗುತ್ತಿದ್ದರೂ ಕೂಡ, ಗಂಗಾವಳಿ ನದಿ ಭಾಗದಲ್ಲಿ ಇಷ್ಟು ಕೆಳಮಟ್ಟದಲ್ಲಿ ಪ್ರತಿದಿನ ವೈಮಾನಿಕ ಸಮೀಕ್ಷೆ ನಡೆಸಿರುವುದು ಈ ಭಾಗದ ಜನರು ಬೆಚ್ಚಿ ಬೀಳುವಂತೆ ಮಾಡಿದೆ.
ಪಣಸಗುಳಿ ಭಾಗದಲ್ಲಿ ಒಂದು ಡ್ಯಾಮ್ ನಿರ್ಮಾಣವಾಗಲಿದೆ ಎಂಬ ಊಹಾಪೋಹ ಹೇಳಿ ಬರುತ್ತಿದೆ. ಇದಕ್ಕೆ ಯಾವುದೇ ಅಧಿಕೃತ ಆಧಾರವಿಲ್ಲದಿದ್ದರೂ ಕೂಡ ಈ ಭಾಗದ ವೈಮಾನಿಕ ಸಮೀಕ್ಷೆಯು ಈ ಚರ್ಚೆಗೆ ಪುಷ್ಟಿ ನೀಡುವಂತಿದೆ.
ಸದ್ಯ ಕೊಡ್ಲಗಡ್ಡೆ ಸುತ್ತಮುತ್ತ ವಿಮಾನ ಹಾರಾಟ ನಡೆಸುತ್ತಿದ್ದು ಜನತೆ ಇನ್ನಷ್ಟು ಭಯಪಡುವಂತಾಗಿದೆ. ಇದು ನದಿ ತಿರುವು ಯೋಜನೆಯ ವೈಮಾನಿಕ ಸಮೀಕ್ಷೆ ಆಗಿದೆ ಎಂದು ಹಲವರ ವಾದವಾಗಿದೆ. ಕಳೆದ ಕೆಳಗಿನಗಳ ಹಿಂದೆ ಸಂಸದ ಬಸವರಾಜ ಬೊಮ್ಮಾಯಿ ರವರು ಈ ಭಾಗದಲ್ಲಿ ವೈಮಾಹಿಕ ಸಮೀಕ್ಷೆ ನಡೆಸುವಂತೆ ಹೇಳಿಕೆ ನೀಡಿದ್ದರು. ಇದರಿಂದಾಗಿ ಅದೇ ರೀತಿಯಾಗಿ ವೈಮಾಲಿಕವಾಗಿ ಸಮೀಕ್ಷೆ ನಡೆಸಲಾಗುತ್ತಿದೆ ಎಂಬುದು ಹಲವರ ವಾದವಾಗಿದೆ.
ಹಳವಳ್ಳಿ ಭಾಗದಲ್ಲಿಯೂ ಕೂಡ ವಿಮಾನ ಹಾರಾಟ ನಡೆಸಿದೆ.
ಈ ರೀತಿಯಾಗಿ ಸೂಕ್ಷ್ಮ ಪರಿಸರದ ಮೇಲೆ ಹಾನಿಯಾಗುವಂತಹ ಪರಿಸರ ವಿರೋಧಿ ಯೋಜನೆ ಜಾರಿಗೆ ಹಿಂದೂ ಮುಂದು ಯೋಚಿಸದೆ ವಿಮಾನಿಕ ಸಮೀಕ್ಷೆ ನಡೆಸಿ ಡಿಪಿಆರ್ ಸಿದ್ಧಪಡಿಸುತ್ತಿದೆಯೇ ಎಂಬುದು ಪ್ರಶ್ನೆಯಾಗಿದೆ
