ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ಕುಂಬಾರ ವಾಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಡೇರಿಯಾ ಗ್ರಾಮದಲ್ಲಿ ನವರಾತ್ರಿಯ ಹಬ್ಬದ ಪ್ರಯುಕ್ತ ವರಾಹ ರೂಪ ಮರಾಠಿ ಪೌರಾಣಿಕ ನಾಟಕ ಪ್ರದರ್ಶನ ನಡೆಯಿತು.
ನಾಟಕ ಪ್ರದರ್ಶನದ ಕಲಾವಿದರಾಗಿ ರಾಜೇಶ ಡೇರೆಕರ,ಮನೋಜ ಡೇರೆಕರ,ರವೀಂದ್ರ ಡೇರೆಕರ,ನಿವಾಸ ಡೇರೆಕರ,ಅಭಿಷೇಕ ಡೇರೆಕರ,ಆಶೀಶ ಡೇರೆಕರ,ದೇವರಥ ಡೇರೆಕರ,ಆದೀಶ ಡೇರೆಕರ,ಶುಭಂ ಡೇರೆಕರ,ರೋಹಿತ ಡೇರೆಕರ ಅಮೋಘ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ಸಂಗೀತ ವಿಭಾಗದಲ್ಲಿ ತಬಲಾ ಅಖಿಲ್ ಡೇರೆಕರ, ಹಾರ್ಮೋನಿಯಂ ದೀಪಕ ಡೇರೆಕರ,ಗಾಯನ ತುಳಸಿದಾಸ ಡೇರೆಕರ ಮತ್ತು ಮೋಹನ ಡೇರೆಕರ, ನಿರ್ದೇಶನ ಗಣಶ್ಯಾಮ ಡೇರೆಕರ ಮತ್ತು ಜಯಾನಂದ ಡೇರೆಕರ ಸಹಕಾರ ನೀಡಿದರು.ಗ್ರಾಮದ ಹಿರಿಯರು,ಪುರುಷರು,ಮಹಿಳೆಯ ರು,ಯುವಕರು,ಯುವತಿಯರು,ಮಕ್ಕಳು,ಪರ ಊರಿನ ಪ್ರೇಕ್ಷಕರು ಬೆಳಗಿನ ಜಾವದವರೆಗೆ ನಾಟಕ ಪ್ರದರ್ಶನವನ್ನು ವೀಕ್ಷಿಸಿದರು. ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡಿತು.