​ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ಹಾಗೂ ಮುಂಡಗೋಡ ತಾಲೂಕಿನ ಎಲ್ಲಾ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ 73ನೇ ಅಖಿಲ ಭಾರತ ಸಹಕಾರ ಸಪ್ತಾಹ-2026ರ ಕಾರ್ಯಕ್ರಮವು ದಿನಾಂಕ 17-11-2026ರ ಮಂಗಳವಾರ ಮಧ್ಯಾಹ್ನ 03-30 ಗಂಟೆಗೆ ಯಲ್ಲಾಪುರದ ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಳಚೆ ಇದರ ಎ.ಪಿ.ಎಂ.ಸಿ. ಶಾಖೆಯಲ್ಲಿ ಜರುಗಿತು.

 

​ಈ ಕಾರ್ಯಕ್ರಮವನ್ನು ಶ್ರೀ ಶ್ರೀಪಾದ ನಾರಾಯಣ ರಾಯ್ಸದ್, ಉಪಾಧ್ಯಕ್ಷರು, ಉ.ಕ. ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ಇವರು ಉದ್ಘಾಟಿಸಿದರು. ಶ್ರೀ ಉಮಾಮಹೇಶ್ವರ ಭಾಗವತ, ಅಧ್ಯಕ್ಷರು, ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಳಚೆ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀ ಹೇರಂಭ ಪರಶುರಾಮ ಹೆಗಡೆ, ನಿರ್ದೇಶಕರು, ಉ.ಕ. ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ಹಾಗೂ ಶ್ರೀ ಶಕ್ತಿ ಪ್ರಸಾದ ಎಸ್. ಜಂಬಗಿ, ಸಹಕಾರ ಅಭಿವೃದ್ಧಿ ಅಧಿಕಾರಿ, ಮುಂಡಗೋಡ ಇವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉಪನ್ಯಾಸಕರಾಗಿ ಆಗಮಿಸಿದ ಶ್ರೀಮತಿ ಅಶ್ವಿನಿ ಹೆಗಡೆ, ಚಾರ್ಟರ್ಡ್ ಅಕೌಂಟೆಂಟ್ ಇವರು ಸಹಕಾರ ಸಂಘಗಳ ಮೂಲಕ ಮೌಲ್ಯವರ್ಧನೆ ಹಾಗೂ ಬ್ರಾಂಡ್ ನಿರ್ಮಾಣದ ಬಗ್ಗೆ ಉಪನ್ಯಾಸ ನೀಡಿದರು.

​ಅನ್ಯ ಕಾರ್ಯಕ್ರಮದ ನಿಮಿತ್ತ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಶ್ರೀ ಶಿವರಾಮ ಎಸ್. ಹೆಬ್ಬಾರ, ಮಾನ್ಯ ಶಾಸಕರು ಹಾಗೂ ಅಧ್ಯಕ್ಷರು, ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ಶಿರಸಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

​ಸಹಕಾರಿ ಸಪ್ತಾಹದ ಅಂಗವಾಗಿ ಯಲ್ಲಾಪುರ ತಾಲೂಕಿನ ಸಹಕಾರ ಸಂಘಗಳಲ್ಲಿ ವಿಕಾಸ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ನಿ., ಯಲ್ಲಾಪುರ ಇವರಿಗೆ ಉತ್ತಮ ಸಹಕಾರ ಸಂಘ ಹಾಗೂ ಶ್ರೀ ಸುಬ್ರಾಯ ಕೃಷ್ಣ ಭಟ್ಟ ಬೊಳ್ಮನೆ, ಅಧ್ಯಕ್ಷರು, ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಮಲವಳ್ಳಿ ಇವರನ್ನು ಉತ್ತಮ ಸಹಕಾರಿ ಹಾಗೂ ಶ್ರೀ ವಿನಾಯಕ ಜಿ. ಶರ್ಮಾ, ಮುಖ್ಯ ಕಾರ್ಯನಿರ್ವಾಹಕರು, ಕುಂದರಗಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಭರತನಹಳ್ಳಿ ಇವರನ್ನು ಉತ್ತಮ ನೌಕರ ಎಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

​ಮುಂಡಗೋಡ ತಾಲೂಕಿನ ಸಹಕಾರ ಸಂಘಗಳಲ್ಲಿ ಶ್ರೀ ಪಾಂಡುರಂಗ ಸಹಕಾರ ಸಂಘ ನಿ., ಮೈನಳ್ಳಿ ಉತ್ತಮ ಸಹಕಾರ ಸಂಘ ಹಾಗೂ ಶ್ರೀ ರವೀಂದ್ರ ಸಿದ್ದನಗೌಡ ಪಾಟೀಲ, ಅಧ್ಯಕ್ಷರು, ಟಿ.ಎ.ಪಿ.ಎಂ.ಸಿ.ಎಸ್. ಮುಂಡಗೋಡ ಇವರನ್ನು ಉತ್ತಮ ಸಹಕಾರಿ ಹಾಗೂ ಶ್ರೀ ಷಣ್ಮುಖ ಮಾರುತಿ ಗುತ್ತೇತನವರ್, ಮುಖ್ಯ ಕಾರ್ಯನಿರ್ವಾಹಕರು, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಪಾಳ ಮತ್ತು ಶ್ರೀ ರುದ್ರಪ್ಪ ವೀರಭದ್ರಪ್ಪ ಬಡಿಗೇರ, ನಿವೃತ್ತ ಮುಖ್ಯ ಕಾರ್ಯನಿರ್ವಾಹಕರು, ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಾತೂರ ಇವರುಗಳನ್ನು ಉತ್ತಮ ನೌಕರ ಎಂದು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

​ಶ್ರೀ ಹೇರಂಭ ಪರಶುರಾಮ ಹೆಗಡೆ, ನಿರ್ದೇಶಕರು, ಉ.ಕ. ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಸಹಕಾರಿಗಳನ್ನು ಸ್ವಾಗತಿಸಿದರು ಹಾಗೂ ಶ್ರೀ ಗೋಪಾಲ ನಾಯಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ., ಕುಮಟಾ ಇವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು. ಶ್ರೀ ದತ್ತಾತ್ರೇಯ ಮಂಜುನಾಥ ಹೆಗಡೆ, ಮುಖ್ಯ ಕಾರ್ಯನಿರ್ವಾಹಕರು, ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಳಚೆ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ., ಕಳಚೆ ಇದರ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸಿಬ್ಬಂದಿಗಳು ಮತ್ತು ತಾಲೂಕಿನ ವಿವಿಧ ಸಹಕಾರ ಸಂಘಗಳ ಆಡಳಿತ ಮಂಡಳಿಯ ಸದಸ್ಯರು ಹಾಗೂ ಮುಖ್ಯ ಕಾರ್ಯನಿರ್ವಾಹಕರು ಮತ್ತು ಸಹಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
​