ಸುದ್ದಿ ಕನ್ನಡ ವಾರ್ತೆ

ಜೊಯಿಡಾ ತಾಲೂಕಿನ ಉಳವಿ ಗ್ರಾಮ ಪಂಚಾಯತ್ ವ್ಯಾಪ್ತಿಯ, ಗುಂದ ವನ್ಯಜೀವಿ ವಲಯದ ಕರ್ಕಣೆ ಗ್ರಾಮದ ರೈತ ಸೀತಾರಾಮ ಧವಳೊ ಮಿರಾಶಿ (58) ವಿಷಕಾರಿ ಹಾವು ಕಡಿತಕ್ಕೆ ಒಳಗಾಗಿದ್ದಾರೆ. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ನವೆಂಬರ್ 6 ರಂದು ರೈತ ಸೀತಾರಾಮ ಧವಳೊ ಮಿರಾಶಿ ಹೊಲದಲ್ಲಿ ಬೆಳೆದ ಕಳೆ ತೆಗೆಯುತ್ತಿದ್ದಾಗ ವಿಷಕಾರಿ ಹಾವು ಬಲ ಕಾಲಿಗೆ ಕಚ್ಚಿದೆ. ವಿಷದ ದಾಹ ಹೆಚ್ಚಾಗಿದ್ದರಿಂದ ಜೊಯಿಡಾ, ಕಾರವಾರ ದವಾಖಾನೆಗೆ ದಾಖಲಿಸಲಾಗಿದೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವನ್ನು ಕಂಡ ಕಾರವಾರ ವೈದ್ಯರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲು. ತಿಳಿಸಿದಂತೆ ಕಿಮ್ಸ್ ಗೆ ದಾಖಲಿಸಲಾಗಿದೆ. ಹಾವಿನ ವಿಷದ ಭಾದೆ ಯಿಂದ ಎರಡು ಕಿಡ್ನಿ ಸರಿಯಾಗಿ ಕೆಲಸ ಮಾಡದೇ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ಸೀತಾರಾಮ ಮಿರಾಶಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಜೀವನ್ಮರಣ ನಡುವೆ ಹೊರಾಡುತ್ತಿದ್ದಾರೆ.

ತಕ್ಷಣ ಕ್ರಮ ಕೈಗೊಳ್ಳುತ್ತೇವೆ.
ಈ ಬಗ್ಗೆ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ ಎಸ್ ಕಳ್ಳಿಮಠ್
ಮಾತನಾಡಿ, ನನಗೆ ತಡವಾಗಿ ಮಾಹಿತಿ ಬಂದಿದೆ. ಗುಂದ ವಲಯ ಅರಣ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು.ಎಂದಿದ್ದಾರೆ.