ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಅವೈಜ್ಞಾನಿಕ ಹಾಗೂ ಪರಿಸರ ವಿರೋಧಿ ನದಿ ತಿರುವು ಯೋಜನೆ ವಿರೋಧಿಸಿ ಯಲ್ಲಾಪುರದಲ್ಲಿ ರಸ್ತೆ ತಡೆ ನಡೆಸಿ ಎಂಟು ದಿನ ಕಳೆದು ಹೋಗಿದೆ. 15 ದಿನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದ ಮನವೊಲಿಸಿ ಈ ಯೋಜನೆಗೆ ಬ್ರೇಕ್ ಹಾಕದಿದ್ದರೆ ಜನಪ್ರತಿನಿಧಿಗಳ ಸಾರ್ವಜನಿಕ ಕಾರ್ಯಕ್ರಮವನ್ನು ಬಹಿಷ್ಕರಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು.
ಆದರೆ ಇದೀಗ ಈ ನಿರ್ಣಯ ತೆಗೆದುಕೊಂಡು ಈಗಾಗಲೇ ಎಂಟು ದಿನ ಕಳೆದು ಹೋಗಿದೆ. ನಮ್ಮ ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಯಾವ ರೀತಿಯ ಹೆಜ್ಜೆ ಇಟ್ಟಿದ್ದಾರೆ….? ಇನ್ನು ಕೇವಲ ಒಂದು ವಾರ ಮಾತ್ರ ಬಾಕಿ ಉಳಿದಿದ್ದು ಈ ಒಂದು ವಾರದಲ್ಲಿ ಈ ಜನ ವಿರೋಧಿ ಯೋಜನೆಗೆ ಬ್ರೇಕ್ ಬೀಳದಿದೆಯೇ…? ಎಂಬುದು ಪ್ರಶ್ನೆಯಾಗಿದೆ.
ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರದ ಸಂರಕ್ಷಣೆಗಾಗಿ , ಉತ್ತರ ಕನ್ನಡದ ಜೀವನದಿಯನ್ನು ಉಳಿಸಿಕೊಳ್ಳುವುದು ಅತ್ಯಗತ್ಯವಾಗಿದೆ.
ಇಲ್ಲಿಯವರೆಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ಸೀಬರ್ಡ್, ಕೈಗಾ, ಶರಾವತಿ, ಟೆಲ್ ರೆಸ್ ಸೇರಿದಂತೆ ಹಲವು ಯೋಜನೆಗಳಿಗೆ ಜಿಲ್ಲೆಯ ಜನತೆ ತಮ್ಮ ಜಮೀನು, ಮನೆ ಮಠಗಳನ್ನು ತ್ಯಾಗ ಮಾಡಿದ್ದಾರೆ. ಇದೀಗ ನದಿ ತಿರುವು ಯೋಜನೆ ತಡೆಗೆ ಸತತ ಹೋರಾಟಗಳು ನಡೆಯುತ್ತಲೇ ಇದೆ. ಎಲ್ಲಾ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳು ಈ ಯೋಜನೆ ತಡೆಗೆ ಯಾವ ರೀತಿ ಹೆಜ್ಜೆ ಇಟ್ಟಿದ್ದಾರೆ …? ಕಾದು ನೋಡಬೇಕಿದೆ… ನಮ್ಮ ಜನಪ್ರತಿನಿಧಿಗಳಿಗೆ ಇನ್ನೂ ಕೇವಲ ಒಂದು ವಾರ ಮಾತ್ರ ಸಮಯ ಅವಕಾಶ ಇದೆ.
