ಸುದ್ದಿ ಕನ್ನಡ ವಾರ್ತೆ
ಜೋಯಿಡಾ : ರವಿವಾರ ಬೆಳಗಾವಿ ಗೋವಾ ರಾಷ್ಟ್ರೀಯ ಹೆದ್ದಾರಿ ತಿನ್ನಯ್ಯ್ ಘಾಟ್ ಬಳಿ ಮಹಿಳೆಯ ಮೃತ ದೇಹ ಪತ್ತೆ ಯಾಗಿದೆ . ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನ್ನಯ್ ಘಾಟ್ ದ ಸೇತುವೆ ಕೆಳಗಡೆ, ಪತ್ತೆಯಾದ ಮಹಿಳೆ ದುರ್ಗಾ ನಗರದ ಅಶ್ವಿನಿ ಬಾಬುರಾವ ಪಾಟೀಲ್ ಎಂದು ಹೇಳಲಾಗಿದ್ದು, ಈಕೆ ಅಂಗನವಾಡಿ ಕಾರ್ಯಕರ್ತೆ ಎಂದು ಕೆಲವರು ಹೇಳುತ್ತಾರೆ,
ಇದು ಕೊಲೆಯೋ ಆತ್ಮಹತ್ಯೆಯೋ ಎಂದು ತನಿಖೆಯಿಂದ, ತಿಳಿದು ಬರಬೇಕಾಗಿದೆ. ಕಳೆದ ಅಕ್ಟೊಬರ್ 2ರಂದು, ಬೆಳಗಾವಿ ಕಕ್ಕೇರಿ ಜಾತ್ರೆಗೆ ಹೋಗುತ್ತೇನೆ ಎಂದು ಹೇಳಿ ಮೃತ ಅಶ್ವಿನಿ ಹೋಗಿದ್ದವಳು, ಬರುವಾಗ ಬೀಡಿ ಎಂಬ ಊರಿನಲ್ಲಿ ಇಳಿದವಳು ಮನೆ ತಲುಪಿರಲಿಲ್ಲ. ತಾಯಿ ಮನೇಗೆ ಬರಲಿಲ್ಲ ಎಂದು ಮಗ ಪೊಲೀಸರಿಗೆ ದೂರು ನೀಡಿದ್ದನು ಎಂದು ಹೇಳಲಾಗುತ್ತಿದೆ. ಶನಿವಾರ ಸಂಜೆ ವಾಹನ ಒಂದರ ಚಾಲಕ ಗೋವಾ ಕಡೆಗೆ ಹೋಗುತ್ತಿರುವಾಗ ತಿನ್ನಯಿ ಘಾಟ್ ಸೇತುವೆ ಕೆಳಗಡೆ, ಮೃತ ದೇಹ ಕಂಡು, ರಾಮನಗರ ಪೊಲೀಸ್ ರಿಗೆ ಮಾಹಿತಿ ನೀಡಿದ್ದಾನೆ, ಕೂಡಲೇ ರಾಮನಗರ ಪೊಲೀಸರು ಸ್ಥಳಕ್ಕೆ ಬಂದು ಮೃತ ದೇಹ ಮೇಲೆ ತಂದಿದ್ದಾರೆ.ಮೃತ ಮಹಿಳೆಯ ಪಕ್ಕ ದೊರೆತ ಮೊಬೈಲ್ ಗಳಲ್ಲಿ ಕೆಲವು ಸಂದೇಶ ಗಳಿವೆ ಎಂದು ಹೇಳಲಾಗುತ್ತಿದೆ, ನಾನು ಬೆಂಗಳೂರಿಗೆ ಹೋಗುತ್ತೇನೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬ ಸಂದೇಶ ಗಳು ನಿಜವೋ ಸುಳ್ಳೋ ಎಂದು ತನಿಖೆಯಿಂದ ತಿಳಿಯ ಬೇಕಾಗಿದೆ. ಈ ಬಗ್ಗೆ ರಾಮನಗರದ ಪಿಎಸ್ಐ ಹಿರಿಯ ಅಧಿಕಾರಿಗಳ ಮಾರ್ಗ ದರ್ಶನದಲ್ಲಿ ಮುಂದಿನ ಕ್ರಮ ಕೈಕೊಂಡಿದ್ದಾರೆ.