ಸುದ್ದಿ ಕನ್ನಡ ವಾರ್ತೆ
ಕಾರವಾರ: ಸೇತುವೆ ಮೇಲಿಂದ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಮಹಿಳೆಯನ್ನು ಪೊಲೀಸರು ಧಾವಿಸಿ ಆಕೆಯನ್ನು ರಕ್ಷಿಸಿದ ಘಟನೆ ನಡೆದಿದೆ.
ಕಾರವಾರದ ಕೊಡಿಬಾಗ್ ಸೇತುವೆ ಮೇಲಿಂದ ಮಹಿಳೆೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದರು. ಆ ಸಂದರ್ಭದಲ್ಲಿ ಮಲ್ಲಾಪುರ ಪೊಲೀಸ್ ಠಾಣೆಯ ಸಿ ಎಚ್ ಸಿ ಸಾಯಿನಂದ ನಾಯಕ್ ರವರು ಮಲ್ಲಾಪುರದಿಂದ ಕಾರವಾರ ಮಾರ್ಗಕ್ಕೆ ಬರುತ್ತಿದ್ದರು. ಆ ಸಂದರ್ಭದಲ್ಲಿ ಸೇತುವೆ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮಹಿಳೆಯೊಬ್ಬರು ಯತ್ನಿಸುತ್ತಿರುವುದನ್ನು ಕಂಡವರು ಕೂಡಲೇ ತಮ್ಮ ಬೈಕ್ ನಿಲ್ಲಿಸಿ ಮಹಿಳೆಯನ್ನು ಕೂಡಲೇ ರಕ್ಷಿಸಿದ್ದಾರೆ. ಪೊಲೀಸರ ಈ ಸಮಯ ಪ್ರಜ್ಞೆಯು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ನಂತರ ಘಟನಾ ಸ್ಥಳಕ್ಕೆ ಆಗಮಿಸಿದ 112 – ಈ ಆರ್ ಎಸ್ ಎಸ್ ಸಿಬ್ಬಂದಿ ದಿನೇಶ್ ನಾಗೆರ ರವರು ಸೇತುವೆ ಮೇಲೆ ಜಮಾಹಿಸಿದ್ದ ಜನರನ್ನು ಬದಿಗೆ ಕಳುಹಿಸಿ ಬಹಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ನಂತರ ಪೊಲೀಸರು ಈ ಮಹಿಳೆಯನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ.
