ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ದಸರಾ ಹಬ್ಬದ ಪ್ರಯುಕ್ತ ನಾದವರ್ಷಿಣಿ ಟ್ರಸ್ಟ್ (ಮರಡಾ) ಗುಂದ ಮತ್ತು ಸ್ವರವಿಹಾರ ಸಂಗೀತ ಕಲಾವೇದಿಕೆ ದಾನಗೇರಿ ಇವರ ಸಹಯೋಗದಲ್ಲಿ ಎರಡು ದಿನಗಳ ಶರತ್ ಸಂಭ್ರಮ- 2 ನಡೆಯಿತು .

ಕಾರ್ಯಕ್ರಮ ನಂದಿಗದ್ದೆಯ ಬಯಲು ರಂಗ ಮಂದಿರದಲ್ಲಿ ನಡೆಯಿತು. ಅಧ್ಯಕ್ಷ. ಸುಧಾಮ ದಾನಗೇರಿ. ಎಲ್ಲರನ್ನೂ ಆತ್ಮೀಯ ವಾಗಿ ಸ್ವಾಗತಿಸಿ, ಕಾರ್ಯಕ್ರಮದ ಮಹತ್ವ ತಿಳಿಸಿದರು. ಮೊದಲನೇ ದಿನ ಕಾರ್ಯಕ್ರಮದಲ್ಲಿ ವೇದಮೂರ್ತಿ ಪ್ರಸನ್ನ ಆರ್ ಭಟ್, ನಂದಿಗದ್ದಾ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ರಾಮಕೃಷ್ಣ ವಿ ದಾನಗೇರಿ, ಸ್ವರವಿಹಾರ ಕಲಾವೇದಿಕೆಯ ಅಧ್ಯಕ್ಷರಾದ ದಯಾನಂದ ವಿ ದಾನಗೇರಿ, ಹಿರಿಯ ವೈದಿಕರಾದ ರಾಮಕೃಷ್ಣ ಭಟ್ ಗೋಳಿಗದ್ದೆ , ಕಿಸಾನ್ ಸಂಘದ ಶ್ರೀಧರ್ ಭಾಗ್ವತ್ , ಸಾಮಾಜಿಕ ಕಾರ್ಯಕರ್ತ ಮಂಜುನಾಥ ಭಾಗವತ್, ಶ್ರೀಮತಿ ವಿದ್ಯಾವತಿ ರಾಮಚಂದ್ರ ಹೆಗಡೆ ನಾದವರ್ಷಿಣಿ ಟ್ರಸ್ಟ ಅಧ್ಯಕ್ಷ ಸುದಾಮ ದಾನಗೇರಿ ಇವರುಗಳು ದೀಪವನ್ನು ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ನಂತರ ಸ್ವರವಿಹಾರ ಕಲಾವೇದಿಕೆಯ ಪುಟಾಣಿಗಳಿಂದ ಹಾಗೂ ನಾದವರ್ಷಿಣಿ ಟ್ರಸ್ಟ್ ನ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ನಡೆಯಿತು ಆರ್ ಎಸ್ ಎಸ್ ನ ಪ್ರಚಾರಕರಾದ ಹುಬ್ಬಳ್ಳಿಯ ಡಾ. ರವೀಂದ್ರ ಜಿ ಅವರಿಂದ ಸಂಸ್ಕಾರ ಸುಗಂಧಿ ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು. ಶಾರ್ವರಿ ತಾಳಮದ್ದಳೆ ಕೂಟ ನಂದಿಗದ್ದೆ ಇವರಿಂದ ದಾನ ಶೂರ ಕರ್ಣ ಎಂಬ ಯಕ್ಷಗಾನ ತಾಳಮದ್ದಳೆಯು ನಡೆಯಿತು.

ತಾಳಮದ್ದಳೆಯ ಭಾಗವತರಾಗಿ ಅನಂತ ಹೆಗಡೆ ದಂತಳಗಿ , ಮೃದಂಗದಲ್ಲಿ ಗಣಪತಿ ಹೆಗಡೆ ಕಣ್ಣಿಜಡ್ಡಿ, ಚಂಡೆವಾದಕರಾಗಿ ಪ್ರಮೋದ್ ಹೆಗಡೆ ಕಬ್ಬಿನಗದ್ದೆ ಇವರುಗಳು ಹಿಮ್ಮೇಳದಲ್ಲಿ ಸಹಕರಿಸಿದರೆ ಮುಮ್ಮೇಳದಲ್ಲಿ ಸುಜಾತಾ ದಾನಗೇರಿ , ಸಂಧ್ಯಾ ದಾನಗೇರಿ , ಶೈಲಾ ಉಪಾಧ್ಯ, ಮಂಗಲಾ ಉಪಾಧ್ಯ, ಸುಕನ್ಯಾ ದೇಸಾಯಿ, ಹರ್ಷಿತಾ ಉಪಾಧ್ಯ ಇವರುಗಳು ಪಾತ್ರವನ್ನು ನಿರ್ವಹಿಸಿದರು. ಪದ್ಮಶ್ರೀ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರೆ ನಾದವರ್ಷಿಣಿ ಟ್ರಸ್ಟ ಅಧ್ಯಕ್ಷ ಸುದಾಮ ದಾನಗೇರಿ ವಂದಿಸಿದರು.