ಸುದ್ದಿ ಕನ್ನಡ ವಾರ್ತೆ

ಶಿರಸಿ: ಜಿಲ್ಲೆಗೆ ಮಾರಕ ವಾಗಿರುವ ಬೇಡ್ತಿ ವರದಾ ನದಿ ತಿರುವು ಯೋಜನೆಯನ್ನು ಖಂಡಿಸಿ ಮಂಗಳವಾರ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳ‌ ಮಾರ್ಗದರ್ಶನದಲ್ಲಿ ಯಲ್ಲಾಪುರದಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಗೆ ಮನೆ ಮನೆಯಿಂದ ಜನರು ಭಾಗವಹಿಸುನ ಮೂಲಕ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡೋಣ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಕರೆ ನೀಡಿದ್ದಾರೆ.

 

ನಮ್ಮ ನದಿ ನಮ್ಮ ಹಕ್ಕು . ನಮ್ಮ ಮನೆ, ಪರಿಸರ, ನದಿಗಳು, ಸಂಸ್ಕೃತಿ ಉಳಿಯ ಬೇಕು ಎಂದರೆ ನಾವೆಲ್ಲರೂ ಹೋರಾಟದಲ್ಲಿ ಭಾಗವಹಿಸಲೇ ಬೇಕು. ಯಾರೋ ಹೋರಾಟ ಮಾಡುತ್ತಾರೆ ಎಂದು ಇಂದು ಸುಮ್ಮನ್ನಿದ್ದರೆ ಸರ್ಕಾರ ನೀಡುವ ಭೀಕ್ಷೆ ಯನ್ನು ತೆಗೆದುಕೊಂಡು ಉತ್ತರ ಕರ್ನಾಟಕ ಭಾಗದಲ್ಲಿ ಬದುಕಬೇಕಾದ ಪರಿಸ್ಥಿತಿ ಬರಬಹುದು ಎಚ್ಚರಿಕೆ ವಹಿಸಿ ಬೇಕಿದೆ.

ನಮ್ಮ ನದಿಗಳ ಒಡಲಿಗೆ ಕೈ ಹಾಕಿದರೆ ಹುಷಾರ್ ಎಂಬ ಸಂದೇಶವನ್ನು ಸರ್ಕಾರಕ್ಕೆ ತಿಳಿಸಬೇಕಿದೆ. ಹಾಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿ ನದಿ ತಿರುವು ಯೋಜನೆಯನ್ನು ಸರ್ಕಾರ ಕೈಬಿಡಬೇಕು ಜೊತೆಗೆ ಡಿಪಿಆರ್ ಸಿದ್ದತೆ ಮಾಡಬಾರದು ಎಂದು ಒಕ್ಕೊರಲಿನಿಂದ ಹೋರಾಟ ಮಾಡೋಣ ಅವರು ಎಂದು ಕರೆ ನೀಡಿದ್ದಾರೆ.