ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ:ಉತ್ತರಕನ್ನಡ ಜಿಲ್ಲೆಯ ಹಚ್ಚ ಹಸುರಿನ ಕಾಡು, ಪ್ರಕೃತಿ ಸೌಂದರ್ಯ ಮತ್ತು ಅಪಾರ ಜೀವವೈವಿದ್ಯಕ್ಕೆ ಹೆಸರಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾನವರು ಮತ್ತು ವನ್ಯ ಜೀವಿಗಳ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದಕ್ಕೆ ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆ ಗ್ರಾಮ ಕೂಡ ಒಂದು ಉದಾಹಣೆಯಾಗಿದೆ. ಗ್ರಾಮದಲ್ಲಿ ಪ್ರತಿ ವರ್ಷ ಬೇಸಿಗೆ ಬಂತೆಂದರೆ ಪ್ರತಿದಿನ ಕಾಡಿನಿಂದ ಅಡಿಕೆ ತೋಟಕ್ಕೆ ರೈತರ ನಿದ್ಧೆಗೆಡಿಸುತ್ತಿವೆ.
ಗುಡ್ಡದಿಂದ ವಸತಿ ಪ್ರದೇಶಕ್ಕೆ…
ಬೇಸಿಗೆಯ ಉಷ್ಣತೆ ಹೆಚ್ಚುತ್ತಿದ್ದಂತೆ ಕಾಡಿನಲ್ಲಿ ನೀರನ ಮೂಲಗಳು ಒಣಗುತ್ತದೆ. ಇದರಿಂದಾಗಿ ಕಾಡುಕೋಣಗಳು ಕುಡಿಯುವ ನೀರು ಮತ್ತು ಮೇವನ್ನು ಹುಡುಕುತ್ತಾ ಬೆಟ್ಟಗಳಿಂದ ಜನವಸತಿ ಪ್ರದೇಶಕ್ಕೆ ಗುಂಪು ಗುಂಪಾಗಿ ಬರುತ್ತಿವೆ. ನೇರವಾಗಿ ಅಡಿಕೆ ತೋಟಕ್ಕೆ ತೆರಳುವ ಕಾಡುಕೋಣಗಳು ಬೆಳೆಗಳನ್ನು ನಾಶಪಡಿಸಿದ ಅದೆಷ್ಟೋ ಘಟನೆಗಳು ನಡೆದಿವೆ, ನಡೆಯುತ್ತಿವೆ.
ಪ್ರತಿದಿನ ಸಂಜೆಯಾಗುತ್ತಿದ್ದಂತೆಯೇ ಕಾಡುಪ್ರಾಣಿಗಳ ಉಪಟಳ, ಕಾಡುಕೋಣಗಳ ಧಾಳಿ ನಡೆಯುತ್ತದೆ. ಇದರಿಂದಾಗಿ ಅಡಿಕೆ ಗಿಡ, ಬಾಳೆಗಿಡ, ತರಕಾರಿ ಗಿಡಗಳನ್ನು ತುಳಿದು ಕಾಡುಕೋಣಗಳು ಕ್ಷಣಾರ್ಧದಲ್ಲಿ ನಾಶಪಡಿಸುತ್ತದೆ. ಇದಿಂದಗಿ ರೈತರು ಭಾರಿ ನಷ್ಠ ಅನುಭವಿಸುತ್ತಿದ್ದಾರೆ. ಕಷ್ಟಪಟ್ಟು ಬಳೆಸಿದ ಅಡಿಕೆಗಿಡ-ಬಾಳೆ ಮರಗಳು ಕಣ್ಣೆದುರೇ ಧ್ವಂಸಗೊಳ್ಳುತ್ತಿರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.
ಕಾಡು ಮತ್ತು ಕೃಷಿ ಇವೆರಡೂ ಉಳಿದರೆ ಮಾತ್ರ ಮಲೆನಾಡನ ಸಮತೋಲನ ಕಾಪಾಡಿಕೊಳ್ಳಬಹುದು. ಸಂಬಂಧಪಟ್ಟ ಇಲಾಖೆಗಳು ಎಚ್ಚೆತ್ತುಕೊಂಡು ಮಾನವ-ವನ್ಯಜೀವಿ ಸಂಘರ್ಷವನ್ನು ತಡೆಗಟ್ಟಲು ಶಾಶ್ವತ ಪರಿಹಾರವನ್ನು ಒದಗಿಸುವ ಮೂಲಕ ಕೊಡ್ಲಗದ್ಧೆ ರೈತರ ಬದುಕಿಗೆ ಭಧ್ರತೆ ಒದಗಿಸಬೇಕಿದೆ.
ನದಿ ತಿರುವು ಯೋಜನೆ ಭೀತಿ…
ಈಗಾಗಲೇ ಬೇಸಿಗೆಯ ಸಂದರ್ಭದಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ನೀರಿನ ಕೊರತೆ ಎದ್ದು ಕಾಣುತ್ತಿದೆ. ಜಲ್ಲೆಯ ಗ್ರಾಮೀಣ ಭಾಗದಲ್ಲಿಯೇ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಜನರು ಹತ್ತು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ನದಿ ತಿರವು ಯೋಜನೆ ಜಾರಿಗೊಂಡರೆ ಇನ್ನೇನಾದೀತು,,,? ಎಂಬ ಪ್ರಶ್ನೆ ಎದುರಾಗಿದೆ. ಇದರಿಂದಾಗಿ ಜನವಿರೋಧಿ ಈ ಯೋಜನೆ ನಿಲ್ಲಿಸಲು ಹೋರಟ ನಡೆಯುತ್ತಿದೆ.
