ಸುದ್ದಿ ಕನ್ನಡ ವಾರ್ತೆ
ಜಗತ್ಪ್ರಸಿದ್ಧ ಪ್ರವಾಸಿ ತಾಣ ಗೋವಾದಲ್ಲಿ ಅಂತರಾಷ್ಟ್ರೀಯ ಚಾರ್ಟರ್ ಪ್ರವಾಸೋದ್ಯಮ ಋತುವು ಸಾಮಾನ್ಯಕ್ಕಿಂತ ಈ ವರ್ಷ ಮೊದಲೇ ಆರಂಭಗೊಂಡಿದ್ದರು ವಿದೇಶಿ ಪ್ರವಾಸಿಗರ ಆಗಮನ ವೇಗ ನಿರೀಕ್ಷೆಗಿಂತ ನಿಧಾನವಾಗಿರುವಂತೆ ಕಂಡುಬರುತ್ತಿದೆ.

 

ಯುರೋಪ್ ರಷ್ಯಾ ಮತ್ತು ಖಜಾಕಿಸ್ತಾನ್ ಇಂತಹ ಪ್ರಮುಖ ಪ್ರವಾಸಿ ಮೂಲ ದೇಶಗಳಲ್ಲಿ ಸಾಮಾನ್ಯವಾಗಿ ತೀವ್ರ ಶೀತದ ಬದಲಿಗೆ ಅಸಾಮಾನ್ಯವಾಗಿ ಬೆಚ್ಚಗಿನ ಹವಾಮಾನ ದಾಖಲಾಗುತ್ತಿದೆ ಇದರಿಂದಾಗಿ ಅತಿ ಕಠಿಣ ಚಳಿಗಾಲದಿಂದ ತಪ್ಪಿಸಿಕೊಳ್ಳಲು ವಾರ್ಷಿಕವಾಗಿ ದಕ್ಷಿಣ ಏಷ್ಯಾದ ದೇಶಗಳಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವಿದೇಶಿ ಪ್ರವಾಸಿಗರು ಈ ವರ್ಷ ತಮ್ಮ ತಾಯ್ನಾಡನ್ನು ಬಿಡುತ್ತಿಲ್ಲ.

Banner Ad

ದಕ್ಷಿಣ ಮತ್ತು ಪಶ್ಚಿಮ ಯುರೋಪಿನಲ್ಲಿ ಶಾಖದ ಅಲೆ ತಡವಾಗಿ ಪ್ರಾರಂಭವಾದ ಕಾರಣ ತಾಪಮಾನವು ಸರಾಸರಿಗಿಂತ ಎಂಟರಿಂದ ಹನ್ನೆರಡು ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಎಲ್ ನೀನೋ ಪರಿಣಾಮದಿಂದಾಗಿ ಖಜಾಕಿಸ್ತಾನ್ ಮತ್ತು ರಷ್ಯಾ ಕೂಡ ಸಾಮಾನ್ಯಕ್ಕಿಂತ ಒಂದರಿಂದ ಎರಡು ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಅನುಭವಿಸುತ್ತಿದೆ. ಇದೇ ಕಾರಣದಿಂದ ರಷ್ಯಾ ಮತ್ತು ಪ್ರಜಾಕಿಸ್ತಾನ್ ಪ್ರವಾಸಿಗರು ಪ್ರಸಕ್ತ ತಮ್ಮ ತಾಯ್ನಾಡಿನಲ್ಲಿ ಬೆಚ್ಚಗಿನ ಹವಾಮಾನವನ್ನೇ ಅನುಭವಿಸುತ್ತಿದ್ದಾರೆ. ಆದೇಶಗಳಲ್ಲಿ ತೀವ್ರ ಶೀತ ಮತ್ತು ಹಿಮಪಾತ ಆರಂಭಗೊಂಡ ನಂತರ ಗೋವಾಕ್ಕೆ ಪ್ರವಾಸಿಗರ ಒಳಹರಿವು ಹೆಚ್ಚಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ.

ಗೋವಾ ರಾಜ್ಯದಲ್ಲಿ ಅಕ್ಟೋಬರ್ ಒಂದರಿಂದ ಪ್ರತಿ ವರ್ಷದಂತೆ ಪ್ರವಾಸೋದ್ಯಮ ಸೀಜನ್ ಆರಂಭಗೊಂಡಿದೆ. ಅಕ್ಟೋಬರ್ ಒಂದರಂದು ರಷ್ಯಾದಿಂದ ಚಾರ್ಟರ್ ವಿಮಾನ ಗೋವಾಕ್ಕೆ ಆಗಮಿಸಿದೆ.

ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಪ್ರತಿಸ್ಪರ್ಧಿ ರಾಷ್ಟ್ರಗಳಾದ ಚೀನಾ ಮತ್ತು ವಿಯೆಟ್ನಾಂ ದೇಶಗಳು ವಿವಿಧ ದೇಶಗಳ ಪ್ರವಾಸಿಗರನ್ನು ಆಕರ್ಷಿಸಲು ಹೆಚ್ಚಿನ ರಿಯಾಯಿತಿಗಳನ್ನು ನೀಡುತ್ತಿವೆ. ಈ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಗೋವಾದ ಹೋಟೆಲ್ ಗಳು ಮತ್ತು ಚಾರ್ಟರ್ ನಿರ್ವಾಹಕರು ವಿಮಾನ ದರಗಳು ಮತ್ತು ಹೋಟೆಲ್ ದರಗಳನ್ನು ಕಡಿತಗೊಳಿಸಲು ಪ್ರಾರಂಭಿಸಿದ್ದಾರೆ.

ಜಗತ್ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿರುವ ಗೋವಾ ರಾಜ್ಯಕ್ಕೆ ಸದ್ಯ ದೇಶಿಯ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಅಂತಯೇ ವಿದೇಶಿ ಪ್ರವಾಸಿಗರ ಆಗಮನವೂ ಕೂಡ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ವಿದೇಶಗಳಲ್ಲಿ ಹವಾಮಾನ ಬದಲಾವಣೆ ಆದ ನಂತರ ಗೋವಾಕ್ಕೆ ಆಗಮಿಸುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗುವ ನೀರಿಕ್ಷೆ ಇದೆ.

 

ಸುದ್ದಿಯ ಮುಖ್ಯಾಂಶಗಳು:

ಗೋವಾದಲ್ಲಿ ಚಾರ್ಟರ್ ಪ್ರವಾಸೋದ್ಯಮ ಋತುವು ಮೊದಲೇ ಆರಂಭಗೊಂಡಿದ್ದರೂ, ವಿದೇಶಿ ಪ್ರವಾಸಿಗರ ಆಗಮನ ನಿರೀಕ್ಷೆಗಿಂತ ನಿಧಾನವಾಗಿದೆ.

  • ​ಹವಾಮಾನ ಬದಲಾವಣೆ ಕಾರಣ: ಯುರೋಪ್, ರಷ್ಯಾ ಮತ್ತು ಕ Kazakh ಾಕಿಸ್ತಾನ್ ದೇಶಗಳಲ್ಲಿ ಅಸಾಮಾನ್ಯವಾಗಿ ಬೆಚ್ಚಗಿನ ಹವಾಮಾನವಿರುವುದರಿಂದ, ವಿದೇಶಿ ಪ್ರವಾಸಿಗರು ಪ್ರವಾಸಕ್ಕೆ ತೆರಳಲು ವಿಳಂಬ ಮಾಡುತ್ತಿದ್ದಾರೆ.
  • ​ಸ್ಪರ್ಧೆ ಮತ್ತು ದರ ಕಡಿತ: ಚೀನಾ ಮತ್ತು ವಿಯೆಟ್ನಾಂ ದೇಶಗಳು ರಿಯಾಯಿತಿಗಳನ್ನು ನೀಡುತ್ತಿರುವುದರಿಂದ, ಗೋವಾದ ಹೋಟೆಲ್‌ಗಳು ಮತ್ತು ಚಾರ್ಟರ್ ನಿರ್ವಾಹಕರು ದರಗಳನ್ನು ಇಳಿಕೆ ಮಾಡಲು ಮುಂದಾಗಿದ್ದಾರೆ.
  • ​ದೇಶೀಯ ಪ್ರವಾಸಿಗರ ಭೇಟಿ: ಸದ್ಯ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದೇಶೀಯ ಪ್ರವಾಸಿಗರು ಆಗಮಿಸುತ್ತಿದ್ದು, ವಿದೇಶಗಳಲ್ಲಿ ಚಳಿಗಾಲ ಆರಂಭವಾದ ನಂತರ ವಿದೇಶಿ ಪ್ರವಾಸಿಗರ ಒಳಹರಿವು ಹೆಚ್ಚಾಗುವ ನಿರೀಕ್ಷೆಯಿದೆ.