ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ಅರಣ್ಯ  ಇಲಾಖೆ ಯಲ್ಲಿ ಹೊಸ ಯೋಜನೆ ಬಂದ ನಂತರ ಅನೇಕ ಸಮಸ್ಯೆ ಗಳು ಬಂದವು ಆದರೆ ಯಲ್ಲಾ ಸಮಸ್ಯೆ ಗಳನ್ನು ಜನರ ಸಹಬಾಗಿತ್ವದಲ್ಲಿ ತಡೆಯಲು ಸಾಧ್ಯ ವಿದೆ .

ಈ ಕ್ಷೆತ್ರದ ಜನತೆಯ ಸಹಕಾರದಿಂದ ಸಮಸ್ಯೆ ಬಗೆಹರಿಸಲು ಸಾಧ್ಯ 58 ಹುಲಿ ಸಂರಕ್ಷಿತ ಪ್ರದೇಶ ದಲ್ಲೂ ಜನರ ಸಹಬಾಗಿತ್ವದಲ್ಲಿ ಉತ್ತಮ ಕಾರ್ಯ ನಡೆದಿದೆ . ಸಮಸ್ಯೆ ಬರದಂತೆ ನಾವು ಕೂಡ ಪ್ರಯತ್ನ ಮಾಡುತ್ತಿದ್ದೇವೆ ನಮ್ಮ ನಿರಂತರ ಚಟುವಟಿಕೆಗೆ ಸ್ಥಳೀಯರ ಸಹಕಾರ ಬೇಕು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂದೆ ಹೇಳಿದರು ಅವರು 71 ನೇ ವನ್ಯ ಜೀವಿ ಸಪ್ತಾಹದಲ್ಲಿ ಮಾತನಾಡಿದರು. ಕೆನರಾ ಅರಣ್ಯ ವೃತ್ತ ಶಿರಸಿ., ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಜೋಯಿಡಾ ಇವರು, ತಾಲೂಕಿನ ಪ್ರವಾಶಿ ತಾಣ ದಟ್ಟ ಹಸಿರಿನ ಸಮೃದ್ಧ ವನಸಿರಿಯ ಕ್ಯಾಸ್ಥಲ್ ರಾಕ್ ನ ತೆಂಗು ನಾರು ಉತ್ಪಾದನಾ ಘಟಕದಲ್ಲಿ 71ನೇ ವನ್ಯ ಜೀವಿ ಸಪ್ತಾಹ ವನ್ನು ಅದ್ದೂರಿಯಾಗಿ ಶುಕ್ರವಾರ ಪ್ರಾರಂಭಿಸಿದರು ಒಂದು ವಾರಗಳ ಕಾಲ ನಡೆಯುವ ವಿವಿಧ ಕಾರ್ಯಕ್ರಮ ಗಳ ಮುಖ್ಯ ಕಾರ್ಯಕ್ರಮ ದ ಸ್ತಬ್ದ ಚಿತ್ರ ಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂದೆ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಚವ್ಹಾಣ ಚಾಲನೆ ನೀಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉಮಾ ಇವರು ಇಂದಿನ ಕಾರ್ಯಕ್ರಮದ ಉದ್ದೇಶ ಜನರ ಸಹಬಾಗಿತ್ವದಲ್ಲಿ ಹೇಗೆ ನಡೆಯ ಬೇಕು ಎಂದು ವಿವರಿಸಿದರು. ಇದೇ ಸಂದರ್ಭದಲ್ಲಿ ಶಾಸಕ ರಾದ ಆರ್ ವಿ ದೇಶಪಾಂಡೆ ಅವರ ಸಂದೇಶ ವನ್ನು ವಲಯ ಅರಣ್ಯಅಧಿಕಾರಿ ಸಂತೋಷ್ ನೀರೇಮಠ್ ರು ಓದಿ ಹೇಳಿದರು. ಸಹಾಯಕ ಸಂರಕ್ಷಣಾಧಿಕಾರಿ ಸಂತೋಷ್ ಚವ್ಹಾಣಮಾತನಾಡಿ ಅರಣ್ಯ ಇಲಾಖೆಯ ಸಂರಕ್ಷಣೆ ಮಹತ್ವ ಜೀವ ವೈವಿದ್ಯತೆ ಗಳ ಕುರಿತು ಮಾಹಿತಿ ನೀಡಿದರು ಜೀವ ವೈವಿದ್ಯತೆ ಯಲ್ಲಿ ನಮ್ಮ ದೇಶ ಅತ್ಯಂತ ಶ್ರೀಮಂತ ದೇಶ ಎಂದು ಅರಣ್ಯ ರಕ್ಸಣೆಯ ಕುರಿತು, ಕಾಡು ಪ್ರಾಣಿಗಳ ರಕ್ಷಣೆ ಹೇಗೆ ಎಂಬ ಬಗ್ಗೆ ಉಪಯುಕ್ತ ಮಾಹಿತಿ ನೀಡಿ ಇದು ಜನರ ಸಹಬಾಳ್ವೆ ಯಲ್ಲಿ ಹೇಗೆ ಸಾಧ್ಯ ಎಂದು ಉತ್ತಮ ಮಾಹಿತಿ ಒದಗಿಸಿದರು . ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ರೆಡ್ಕರ್ ಕಾರ್ಯಕ್ರಮ ದ ಉದ್ದೇಶ ವಿವರಿಸಿ ಮಾತ ನಾಡಿ ಕಲಂಬುಲಿ ಕ್ಯಾಸ್ಟಲ್ ರಾಕ್ ಹೇಗೆ ಆಯಿತು ಎಂದು ವಿವರಿಸಿದರು.