ಸುದ್ದಿ ಕನ್ನಡ ವಾರ್ತೆ
ಅಂಕೋಲಾ: ಜಾನಪದ ಹಾಡುಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ವಿಧಿವಶರಾಗಿದ್ದಾರೆ.
ಅವರಿಗೆ 91 ವರ್ಷ ವಯಸ್ಸಾಗಿತ್ತು. ಕಳೆದ ಹಲವು ದಿನಗಳಿಂದ ಅವರು ವಯೋಸಹಜ ಕಾಯಿಲೆಯಿಂದ ನರಳುತ್ತಿದ್ದರು. ಸುಕ್ರಿ ಬೊಮ್ಮು ಗೌಡ ರವರು ಇಂದು ಬೆಳಗಿನ ಜಾವ 2.30 ರ ಸುಮಾರು ನಿಧನರಾದರು.
ಬುಡಕಟ್ಟು ಜನಾಂಗದ ಸುಕ್ರೀಗೌಡ ರವರು ನೂರಾರು ಹಾಡುಗಳನ್ನು ತಾವೇ ಕಟ್ಟಿ ಹಾಡುತ್ತಿದ್ದರು. ಇದರಿಂದಾಗಿ ಅವರು ಜಾನಪದ ಕೋಗಿಲೆ ಎಂದೇ ಪ್ರಸಿದ್ಧಿಯಾಗಿದ್ದರು. ಇವರ ಪ್ರತಿಭೆಗೆ ನೂರಾರು ಪ್ರಶಸ್ತಿಗಳು ಗೌರವಗಳು ಸಂಧಿವೆ.
ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮು ಗೌಡರವರ ನಿಧನಕ್ಕೆ ಸುದ್ದಿ ಕನ್ನಡ ಬಳಗ ಸಂತಾಪ ವ್ಯಕ್ತಪಡಿಸಿದೆ.