ಸುದ್ದಿ ಕನ್ನಡ ವಾರ್ತೆ
ಬೆಂಗಳೂರು: ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ಜಿಲ್ಲೆ ಉಳಿಸಿ ಎಂಬ ಘೋಷವಾಕ್ಯ, ಉತ್ತರ ಕನ್ನಡ ಜಿಲ್ಲೆಯ ನೈಸರ್ಗಿಕ ಸಂಪತ್ತು ರಕ್ಷಣೆ ಆಗಬೇಕು. ಉತ್ತರ ಕನ್ನಡ ಜಿಲ್ಲೆಯ ಜೀವನಾಡಿಗಳಾಗಿರುವ ನದಿಗಳ ಜೋಡಣೆ ಯೋಜನೆಗೆ ಅವಕಾಶ ನೀಡಬಾರದು. ಎಂದು ಬೆಂಗಳೂರಿನಲ್ಲಿ ಶನಿವಾರ ಫ್ರೀಡಂ ಪಾರ್ಕ್ ನಲ್ಲಿ ಬೇಡ್ತಿ_ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಆಯೋಜಿಸಿದ್ದ ಬೃಹತ್ ಧರಣಿಯಲ್ಲಿ ಆಗ್ರಹಿಸಲಾಯಿತು.

ಈ ಬೃಹತ್ ಧರಣಿಗೆ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ರವರು ಸಂದೇಶ ಕಳುಹಿಸಿ- ಇಲ್ಲಿ 2,000 ಜನ ಸೇರಿದ್ದಾರೆ ಎಂದರೆ ಅದು ಎರಡು ಲಕ್ಷ ದ್ವನಿಗೆ ಸಮಾನ. ಇಂದಿನ ಜನಸಂಖ್ಯೆ ಮೇಲ್ನೋಟಕ್ಕೆ ಕಡಿಮೆ ಎನಿಸಿದರು ಅದರ ಹಿಂದೆ ದೊಡ್ಡ ಜನಶಕ್ತಿಯ ಬೆಂಬಲ ಇದೆ. ಶಾಶ್ವತ ವಿನಾಶ ತಂದು ಕೊಡುವ ಈ ರೀತಿಯ ಯೋಜನೆಗಳನ್ನು ಏಕೆ ಜಾರಿಗೆ ತರಬೇಕು ಎಂದು ನಾವೆಲ್ಲ ಪ್ರಶ್ನಿಸಬೇಕಾಗಿದೆ. ಮುಂದೆಯೂ ಕೂಡ ಇಂತಹ ಯೋಜನೆಗಳು ಬಂದರೆ ಇದೇ ಒಕ್ಕೋರಲ ಧ್ವನಿ ಮೂಡಿ ಬರಬೇಕು ಎಂದು ಶ್ರೀಗಳು ತಮ್ಮ ಸಂದೇಶದಲ್ಲಿ ನುಡಿದರು.

ಈ ಬೃಹತ್ ಧರಣಿ ಉದ್ದೇಶಿಸಿ ನೀರ್ನಳ್ಳಿ ರಾಮಕೃಷ್ಣ, ಜಯಂತ್ ಕಾಯ್ಕಿಣಿ, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ, ಪರಿಸರ ತಜ್ಞ ನಾಗೇಶ್ ಹೆಗಡೆ, ತೇಜಸ್ವಿನಿ ಅನಂತ್ ಕುಮಾರ್, ತಿಮ್ಮಪ್ಪ ಭಟ್, ಕೊಳ್ಳ ಸಂರಕ್ಷಣಾ ಸಮಿತಿಯ ಅನಂತ ಹೆಗಡೆ ಅಶಿ ಸರ್ ಮಾತನಾಡಿದರು.
ಯಾವುದೇ ಗೊಂದಲ ಇಲ್ಲದೆ ಅಚ್ಚುಕಟ್ಟಾಗಿ ಧರಣಿ ಆಯೋಜಿಸಲಾಗಿತ್ತು. ಈ ಕುರಿತು ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
