ಸುದ್ದಿ ಕನ್ನಡ ವಾರ್ತೆ
ಜೋಯಿಡಾ ; ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದಿಲೀಷ ಶಶಿ ಅವರು ಈ ದಿನ ಜೊಯಿಡಾ ತಾಲ್ಲೂಕಿಗೆ ಅನಿರೀಕ್ಷಿತ ಬೇಟಿ ನೀಡಿದರು. ಅವರು ರಾಮನಗರದ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಯ ಪೈಪ್ಲೈನ್ ಕಾಮಗಾರಿ,OHT ಕಾಮಗಾರಿಯ ಪ್ರಗತಿ, OHT ಕಾಮಗಾರಿ ವಿಳಂಬ ಮಾಡುವ ಸ್ಥಳ ಪರಿಶೀಲಿಸಿದರು ಕೆಲಸ ಪ್ರಾರಂಭ ಮಾಡುವುದಕ್ಕೆ ಕ್ರಮ ವಹಿಸಲು RWS AEE ಯವರಿಗೆ ಸೂಚನೆಯ ನೀಡಿದರು. ಜಾಕ್ವೇಲ್ ಅಳವಡಿಸುವ,ನೀರಿನ ಮೂಲದ ಸ್ಥಳವನ್ನ ಪರಿಶೀಲಿಸಿದರು, ಬೋರೆಗಾಳಿ ಝರಿಯ ನೀರಿನ ಮೂಲದ ಕುಡಿಯುವ ನೀರಿನ ತೊಟ್ಟಿಯ ಶುಚಿತ್ವ ಪರಿಶೀಲಿಸಿ ಸ್ವಚ್ಛ ಮಾಡಿಸಿ ವರದಿಯನ್ನ ನೀಡುವಂತೆ ಸ್ಥಳದಲ್ಲಿದ್ದ ಪಿಡಿಒ ರವರಿಗೆ ಸೂಚನೆಯನ್ನ ನೀಡಿದರು.

ರಾಮನಗರ ಗ್ರಾಮ ಪಂಚಾಯಿತಿಯ PWUM ಘಟಕ ಪರಿಶೀಲಿಸಿ ನ್ಯೂನತೆಯ ಬಗ್ಗೆ ವರದಿಯನ್ನ ನೀಡುವುದಕ್ಕೆ ,ಘಟಕದ ಕಾರ್ಯಚಟುವಟಿಕೆ ,ತರಬೇತಿಯ ಅವಶ್ಯಕತೆಯ ಬಗ್ಗೆ, ಗ್ರಾಮ ಪಂಚಾಯಿತಿಯ ಕಡತ ನಿರ್ವಹಣೆ,ನಗದು ಪುಸ್ತಕ ನಿರ್ವಹಣೆಯ ಬಗ್ಗೆ ಸಲಹೆ ಸೂಚನೆಯನ್ನ ನೀಡಿದರು, ಮಹಾತ್ಮ ಗಾಂಧಿ ರಾಮನಗರ ಗ್ರಾಮ ಪಂಚಾಯಿತಿಯ ಸ್ವಚ್ಛತೆಯ ಬಗ್ಗೆ ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು.ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ಪಡೆದರು.
