ಸುದ್ದಿ ಕನ್ನಡ ವಾರ್ತೆ
ಮಹಾಲಿಂಗಪುರ ಮತ್ತು ಮಹಾರಾಷ್ಟçದ ಗಡಿಭಾಗದಲ್ಲಿ ನಡೆಯುತ್ತಿರುವ ಅಕ್ರಮ ಭ್ರೂಣ ಲಿಂಗ ಪತ್ತೆ ಮತ್ತು ಗರ್ಭಪಾತ ಜಾಲದ ಕುರಿತು ಖಚಿತ ಮಾಹಿತಿ ಮತ್ತು ಮಾಧ್ಯಮಗಳ ಸರಣಿ ವರದಿಯನ್ನು ಆಧರಿಸಿ, ಬಾಗಲಕೋಟೆ ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ಜಾಲವನ್ನು ಬೇರು ಸಹಿತ ಬೇಧಿಸಿ ಸಾಕ್ಷಿ ಸಮೇತ ಸೆರೆಹಿಡಿಯಲು ರಚನೆಯಾದ ಉನ್ನತ ಮಹಿಳಾ ಅಧಿಕಾರಿಗಳ ತಂಡವು ಹಗಲು-ರಾತ್ರಿ ಸೇರಿ ಸುದೀರ್ಘ 17 ಘಂಟೆಗಳ ಕಾಲ ಮಹಾರಾಷ್ಟçದ ಗಡಿಗ್ರಾಮಗಳಲ್ಲಿ ನಿಯೋಜಿತ ಸ್ಟಿಂಗ್ ಆಪರೇಷನ್ ನಡೆಸಿ, ಅಕ್ರಮ ಭ್ರೂಣಲಿಂಗ ಪತ್ತೆ ಮತ್ತು ಗರ್ಭಪಾತದ ಜಾಲವನ್ನು ಪತ್ತೆಹಚ್ಚಿ, ಸ್ಕಾö್ಯನಿಂಗ್ ಮಸೀನ್ ಸಹಿತ ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿ ರಾಜ್ಯದ ಗಮನ ಸೆಳೆದಿದೆ.
*ಉನ್ನತ ಮಹಿಳಾ ಅಧಿಕಾರಿಗಳ ತಂಡದ ರೋಚಕ ಕಾರ್ಯಾಚರಣೆ:*
ಆಮಖಂಡಿ ಉಪವಿಭಾಗಾಧಿಕಾರಿ ಶ್ರೀಮತಿ ಶ್ವೇತಾ ಬೀಡಿಕರ್, ಬೆಂಗಳೂರು ಆರೋಗ್ಯ ಸೌಧದ ಮೆಡಿಕಲ್ ಆಕ್ಟ್ ಉಪ ನಿರ್ದೇಶಕಿ ಶ್ರೀಮತಿ ಶೋಭಾ, ಬಾಗಲಕೋಟೆ ಡಿಎಚ್ಓ ಶ್ರೀಮತಿ ಸುವರ್ಣಾ ಕುಲಕರ್ಣಿ, ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ, ಬೆಂಗಳೂರು ಆರೋಗ್ಯ ಸೌಧದ ಮನು ನೇತೃತ್ವದ 12 ಜನರ ತಂಡವು ಅ.5ರ ಸೋಮವಾರ ಮಧ್ಯಾಹ್ನ 3-30ರಿಂದ ಅ.6ರ ಮಂಗಳವಾರ ಮುಂಜಾನೆ 8-30ವರೆಗೆ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳನ್ನು ದೂರವಿಟ್ಟು ಅತ್ಯಂತ ಧೈರ್ಯ ಮತ್ತು ಜಾಣ್ಮೆಯಿಂದ ಸುಮಾರು 17 ಘಂಟಿಗಳ ಯಶಸ್ವಿ ಕಾರ್ಯಾಚರಣೆ ನಡೆಸಿ ಮಹಾರಾಷ್ಟç ಗಡಿಭಾಗದ ಜತ್ತ ತಾಲ್ಲೂಕಿನ ಜಾಡರ ಬಬಲಾದಿ, ಕರ್ಜಗಿ ಗ್ರಾಮದಲ್ಲಿ ರಾತ್ರಿಯಿಡಿ ರೋಚಕ ಕಾರ್ಯಾಚರಣೆ ನಡೆಸಿ ಭ್ರೂಣಲಿಂಗ ಪತ್ತೆ ಮತ್ತು ಗರ್ಬಪಾತದ ಅಕ್ರಮ ಜಾಲವನ್ನು ಬೇಧಿಸಿ, ಸ್ಕಾö್ಯನಿಂಗ್ ಮಸೀನ ಸಹಿತ ಆರೋಪಿತರನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
*ಕವಿತಾ ಬಾಡನವರ ಬಾಯ್ಬಿಟ್ಟ ಸತ್ಯದ ಸುಳಿವು :*
ಪ್ರಕರಣದ ಪ್ರಮುಖ ಮಧ್ಯವರ್ತಿ ಹಾಗೂ 2024ರ ಭ್ರೂಣಹತ್ಯೆ ಆರೋಪಿ, ಸದ್ಯ ಜಾಮೀನು ಮೇಲೆ ಹೊರಗಿದ್ದು ಮತ್ತೆ ಇಂತಹ ಪ್ರಕರಣದಲ್ಲಿ ಭಾಗಿಯಾದ ಆರೋಪಿ ಕವಿತಾ ಬಾಡನವರ ಅವರನ್ನು ವಶಕ್ಕೆ ಪಡೆದ ತಂಡವು ನಡೆಸಿದ ವಿಚಾರಣೆಯಲ್ಲಿ ಮಹಾರಾಷ್ಟç ರಾಜ್ಯದ ಜತ್ತ ತಾಲೂಕಿನ ಜಾಡರ ಬಬಲಾದಿ ಗ್ರಾಮ ಕೇಂದ್ರವಾಗಿಟ್ಟುಕೊಂಡು ಅಕ್ರಮ ಲಿಂಗ ಪತ್ತೆ ನಡೆಯುತ್ತಿದೆ. ತಾನು ಈಗಾಗಲೇ 3-4 ಗರ್ಭಿಣಿಯರಿಗೆ ಸ್ಕಾö್ಯನಿಂಗ್ ಮತ್ತು ಗರ್ಭಪಾತ ಮಾಡಿಸಿರುವದಾಗಿ ಸತ್ಯ ಬಾಯ್ಬಿಟ್ಟ ಕಾರಣ ಮಹಿಳಾ ಅಧಿಕಾರಿಗಳ ತಂಡ ಜಾಡರ ಬಬಲಾದಿಗೆ ತೆರಳಿದೆ.
*ಗ್ರಾಹಕರಂತೆ ನಟಿಸಿದ ಮಹಿಳಾ ಅಧಿಕಾರಿಗಳು :*
ಜಾಲದ ಸೂತ್ರಧಾರಿಗಳನ್ನು ಸಾಕ್ಷಿ ಸಹಿತ ಹಿಡಿಯಲು ಅಧಿಕಾರಿಗಳ ತಂಡವೇ ಸ್ವತ: ಗ್ರಾಹಕರಂತೆ ನಟಿಸಲು ತಿರ್ಮಾನಿಸಿ ಕಾರ್ಯಾಚರಣೆ ನಡೆಸಿದ್ದಾರೆ. ಜಮಖಂಡಿ ಎಸಿ ಶ್ರೀಮತಿ ಶ್ವೇತಾ ಬೀಡಿಕರ್ ಗರ್ಭಿಣಿ ಮಹಿಳೆಯಾಗಿ, ಡಿಡಿ ಶ್ರೀಮತಿ ಶೋಭಾ ನಾದಿನಿಯಾಗಿ, ಬಾಗಲಕೋಟೆ ಡಿಎಚ್ಒ ಶ್ರೀಮತಿ ಸುವರ್ಣಾ ಕುಲಕರ್ಣಿ ಅವರು ತಾಯಿಯಾಗಿ ನಟಿಸಿ ಮಧ್ಯವರ್ತಿಯೊಂದಿಗೆ ರಾತ್ರಿ 9-30ಕ್ಕೆ ಜಾಡರ ಬಬಲಾದಿ ಗ್ರಾಮಕ್ಕೆ ತೆರಳಿದ್ದಾರೆ.
*ಜಾಡರ ಬಬಲಾದಿಯ ತೋಟದ ಮನೆಗೆ ತಂಡ:*
ಜಾಡರ ಬಬಲಾದಿಯ ಗ್ರಾಮದ ಮನೆಯೊಂದರಲ್ಲಿ ನಿಖಿಲ್ ತೇಲಿ(23 ವರ್ಷ) ಎಂಬಾತನನ್ನು ಸಂಪರ್ಕಿಸಿದಾಗ, ಸ್ಕಾö್ಯನಿಂಗ್ ಇಲ್ಲಿ ಮಾಡುವದಿಲ್ಲ, ತೋಟದ ಮನೆಯಲ್ಲಿ ಮಾಡಲಾಗುವದು ಎಂದು, ತಂಡವನ್ನು ತೋಟದ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆತನ ತಾಯಿ ದಾನಕ್ಕ ತೇಲಿ ಎಂಬಾಕೆ ಹಣದ ಬೇಡಿಕೆ ಇಟ್ಟು ಸ್ಕಾö್ಯನಿಂಗ್ ಮಾಡಲು ಒಪ್ಪಿಕೊಂಡಿದ್ದಾಳೆ. ಆದರೆ ಯಂತ್ರವನ್ನು ಕರ್ಜಗಿ ಗ್ರಾಮದ ಕವಿತಾ ಗೋಡೆಕರ್ ಎಂಬುವವರ ಮನೆಯಲ್ಲಿ ಇಟ್ಟಿರುವದಾಗಿ ತಿಳಿಸಿದ್ದಾಳೆ.
*ಕರ್ಜಗಿಯಲ್ಲಿ ಸ್ಕಾö್ಯನಿಂಗ್ ಯಂತ್ರದ ಜಪ್ತಿ :*
ಅಧಿಕಾರಿಗಳ ತಂಡವು ನಿಖಿಲ್ ತೇಲಿಯನ್ನು ಜೊತೆ ಕರೆದುಕೊಂಡು ರಾತ್ರಿ ೧೧ ಘಂಟೆಗೆ ಕರ್ಜಗಿ ಗ್ರಾಮದ ಕವಿತಾ ಗೋಡೆಕರ್ ಮತ್ತು ಬಸವರಾಜ ಗೋಡೆಕರ್ ದಂಪತಿಗಳ ಮನೆಗೆ ತೆರಳಿದ್ದಾರೆ. ಅಲ್ಲಿ ದಂಪತಿಗಳು ಪೋರ್ಟೇಬಲ್ ಸ್ಕಾö್ಯನಿಂಗ್ ಯಂತ್ರವನ್ನು ಹೊರತೆಗೆದು ಸ್ಕಾö್ಯನಿಂಗ್ ಮಾಡಲು ಸಿದ್ದತೆ ಮಾಡಿಕೊಳ್ಳುವಾಗ, ಅಧಿಕಾರಿಗಳ ತಂಡವು ದಾಳಿ ನಡೆಸಿ ಸ್ಕಾö್ಯನಿಂಗ್ ಯಂತ್ರ ಮತ್ತು ಪರಿಕರಗಳನ್ನು ಸ್ಥಳದಲ್ಲೇ ವಶಪಡಿಸಿಕೊಂಡಿದೆ.
*ಮೂಲ ಕಿಂಗ್ಪಿನ್ ಪರಾರಿ :*
ಭ್ರೂಣಹತ್ಯೆ ಅಕ್ರಮ ಜಾಲದ ಮೂಲ ಕಿಂಗ್ಪಿನ್ ಆಗಿರುವ ಸಂಜಯ ವಾಗ್ಮೋರೆ ಉರ್ಪ್ ಪಾಟೀಲ್ ಎಂಬ ನಕಲಿ ವೈದ್ಯನನ್ನು ಹಿಡಿಯುವದಕ್ಕಾಗಿ ಕರ್ಜಗಿಯಿಂದ ಮರಳಿ ಜಾಡರ ಬಬಲಾದಿಗೆ ತೆರಳಿದ್ದಾರೆ. ಅಷ್ಟರಲ್ಲೇ ಸುಳಿವು ಅರಿತ ಕಿಂಗ್ಪಿನ್ ಪರಾರಿಯಾಗಿದ್ದಾನೆ.
*ಉಮದಿ ಠಾಣೆಯಲ್ಲಿ ಪ್ರಕರಣ ದಾಖಲು:*
ಕಾರ್ಯಾಚರಣೆ ನಂತರ ಅ.6 ನಸುಕಿನ ಜಾವ 3-30ಕ್ಕೆ ಉಮದಿ ಪೊಲೀಸ್ ಠಾಣೆಗೆ ತೆರಳಿ, ಜಪ್ತಿ ಮಾಡಿದ ಪೋರ್ಟೇಬಲ್ ಸ್ಕಾö್ಯನಿಂಗ್ ಯಂತ್ರವನ್ನು ಅಲ್ಲಿನ ಸಕ್ಷಮ ವೈದ್ಯಾಧಿಕಾರಿಗಳಿಗೆ ಅಧಿಕೃತವಾಗಿ ಹಸ್ತಾಂತರಿಸಿದೆ. ಪಿಸಿ-ಪಿಎನ್ಡಿಟಿ ಕಾಯ್ದೆಯ ಉಲ್ಲಂಘಟನೆ, ನಕಲಿ ವೈದ್ಯಕೀಯ ವೃತ್ತಿ, ಒಳಸಂಚು ಹಾಗೂ ಅಪರಾಧಕ್ಕೆ ಕುಮ್ಮಕ್ಕು ಹಿನ್ನಲೆಯಲ್ಲಿ ಆರೋಪಿ ನಂಬರ 1 ನಕಲಿ ವೈದ್ಯ, ಪ್ರಕರಣ ಮುಖ್ಯ ಆರೋಪಿ ಸಂಜಯ ವಾಗ್ಮೋರೆ ಉರ್ಪ್ ಪಾಟೀಲ, ಆರೋಪಿ 2 ಜಾಡರ ಬಬಲಾದಿಯ ನಿಖಿಲ್ ತೇಲಿ, ಆರೋಪಿ ನಂಬರ 3 ಜಾಡರ ಬಬಲಾದಿಯ ದಾನಕ್ಕ ತೇಲಿ, ಆರೋಪಿ ನಂಬರ 4 ಕರ್ಜಗಿಯ ತಮ್ಮ ಮನೆಯಲ್ಲಿ ಸ್ಕಾö್ಯನಿಂಗ್ ಯಂತ್ರ ಇಟ್ಟುಕೊಂಡು ಅಪರಾಧಕ್ಕೆ ಕುಮ್ಮಕ್ಕು ನೀಡಿದ ಕವಿತಾ ಗೋಡೆಕರ್ ವಿರುದ್ದ ಕ್ರೀಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಮಧ್ಯವರ್ತಿ ಮಹಾಲಿಂಗಪುರದ ಕವಿತಾ ಬಾಡನವರ ಪಾತ್ರದ ಕುರಿತು ಕಾನೂನು ತನಿಖೆ ಮುಂದುವರೆದಿದೆ ಎಂದು ಜಮಖಂಡಿ ಎಸಿ ಶ್ವೇತಾ ಬೀಡಿಕರ್ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
*ಜಾಮೀನು ರಹಿತ ಅಪರಾಧ-ಗಡಿಪಾರು ಎಚ್ಚರಿಕೆ :*
ಭ್ರೂಣದ ಲಿಂಗ ಪತ್ತೆ ಮಾಡುವದು, ಮಾಡಿಸುವದು ಹಾಗೂ ನಕಲಿ ವೈದ್ಯರಿಂದ ಅಕ್ರಮ ಗರ್ಭಪಾತ ಮಾಡಿಸಿಕೊಳ್ಳುವುದು ಕಾನೂನಿನ ಪ್ರಕಾರ ಗಂಭೀರ ಮತ್ತು ಜಾಮೀನು ರಹಿತ ಅಪರಾಧವಾಗಿದೆ. ಈ ಕೃತ್ಯದಲ್ಲಿ ತೊಡಗುವ ನಕಲಿ ವೈದ್ಯರು, ಮಧ್ಯವರ್ತಿಗಳು ಹಾಗೂ ಇದಕ್ಕೆ ಪ್ರಚೋದನೆ ನೀಡುವವರಿಗೆ ಪಿಸಿ-ಪಿಎನ್ಡಿಟಿ ಕಾಯ್ದೆ ಮತ್ತು ಎಂಟಿಪಿ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಕನಿಷ್ಟ ೩ ವರ್ಷದಿಂದ ೧೦ ವರ್ಷಗಳವರೆಗೆ ಜೈಲುಶಿಕ್ಷೆ, ಜೀವಾವಧಿ ಶಿಕ್ಷೆ ಹಾಗೂ ಲಕ್ಷಾಂತರ ರೂಗಳ ದಂಡ ವಿಧಿಸುವ ಅವಕಾಶವಿದೆ. ಇಂತಹ ಸಮಾಜಘಾತುಕ ವ್ಯಕ್ತಿಗಳನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡಲು ಕ್ರಮ ಜರುಗಿಸಲಾಗುತ್ತದೆ. ಸಾರ್ವಜನಿಕರು ಯಾವುದೇ ಕಾರಣಕ್ಕೂ ನಕಲಿ ವೈದ್ಯರ ಆಮಿಷಕ್ಕೆ ಒಳಗಾಗಿ ತಾಯಿ ಮತ್ತು ಮಗುವಿನ ಅಮೂಲ್ಯ ಜೀವಕ್ಕೆ ಅಪಾಯ ತಂದುಕೊಳ್ಳಬೇಡಿ. ಇಂತಹ ಅಕ್ರಮ ಲಿಂಗ ಪತ್ತೆ ಅಥವಾ ಅನಧಿಕೃತ ಗರ್ಭಪಾತ ದಂಧೆಗಳು ಕಂಡುಬAದಲ್ಲಿ ತಕ್ಷಣವೇ ಸ್ಥಳೀಯ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ ಅಥವಾ ಪೊಲೀಸ್ ಠಾಣೆಗೆ ಸಾರ್ವಜನಿಕರು ಧೈರ್ಯವಾಗಿ ಮಾಹಿತಿ ನೀಡಬೇಕು.
—- *ಶ್ರೀಮತಿ ಶ್ವೇತಾ ಬೀಡಿಕರ್. ಎಸಿ ಜಮಖಂಡಿ ಹಾಗೂ ಸಕ್ಷಮ ಪ್ರಾಧಿಕಾರ, ಪಿಸಿ-ಪಿಎನ್ಡಿಟಿ ಕಾಯ್ದೆ.*
——————————————
