ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯತ ವ್ಯಾಪ್ತಿಯ ಫಣಸೋಲಿ ಅರಣ್ಯ ಇಲಾಖೆಯ ವ್ಯಾಪ್ತಿಯ ಪೋಟೋಲಿ ತನಿಖಾ ಠಾಣೆಯಿಂದ ಮಂದುರ್ಲಿ ಗೇಟ್ ಹಾಗೂ ಚಾವರ್ಲಿ ಗ್ರಾಮದವರೆಗೆ ಗುರುವಾರ 72 ನೇ ವನ್ಯಜೀವಿ ಸಪ್ತಾಹದ ಕಾರ್ಯಕ್ರಮದ ನಿಮಿತ್ತ ಸ್ವಚ್ಛತೆಯ ಕಾರ್ಯಕ್ರಮ ನಡೆಯಿತು.

 

ಫಣಸೋಲಿ ವಲಯ ಅರಣ್ಯ ಇಲಾಖೆಯ ಅರಣ್ಯಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಶಾಂತಾರಾಮ ಅವರೊಂದಿಗೆ ಅರಣ್ಯ ರಕ್ಷಕರಾದ ರೇವಣಸಿದ್ಧ. ಕೆ,ಮಹಿಳಾ ಅರಣ್ಯ ರಕ್ಷಕರು,ವಾಚರ್ ಗಳ ಸಹಕಾರದಲ್ಲಿ ಸ್ವಚ್ಛತೆಯ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ರಸ್ತೆಯ ಬದಿಯ ಕಾಡಿನಲ್ಲಿ ಬಿದ್ದಿದ್ದ ವಿವಿಧ ಕಸವನ್ನು ಆಯ್ದು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಯಿತು.