ಸುದ್ದಿ ಕನ್ನಡ ವಾರ್ತೆ

ದಾಂಡೇಲಿ : ಬಡವರಿಗೆ ಅತ್ಯಂತ ಉಪಯುಕ್ತವಾದ ಯೋಜನೆಗಳಲ್ಲಿ ಒಂದಾಗಿರುವ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ಅಂಚೆ ಉಳಿತಾಯದಾರರು ಭಾಗಿಯಾಗುವಂತೆ ಅಂಚೆ ಇಲಾಖೆಯ ಶಿರಸಿ ವಿಭಾಗದ ಅಂಚೆ ಅಧೀಕ್ಷಕರಾದ ಪೂವಪ್ಪ ಅವರು ಕರೆ ನೀಡಿದ್ದಾರೆ.

 

ಅವರು ಮಂಗಳವಾರ ನಗರದ ಪ್ರಧಾನ ಅಂಚೆ ಕಚೇರಿಯಲ್ಲಿ ಮಾಧ್ಯಮಕ್ಕೆ ನೀಡಿದ ಹೇಳಿಕೆಯಲ್ಲಿ, ವರ್ಷದಿಂದ ವರ್ಷಕ್ಕೆ ನವೀಕರಿಸಬಹುದಾದ ಒಂದು ವರ್ಷದ ಅಪಘಾತ ವಿಮಾ ಯೋಜನೆ ಇದಾಗಿದೆ. 18ರಿಂದ 70 ವರ್ಷ ವಯೋಮಿತಿಯವರು ಈ ಯೋಜನೆಯ ಫಲಾನುಭವಿಗಳಾಗಬಹುದು. ವರ್ಷಕ್ಕೆ ಕೇವಲ 20 ರೂಪಾಯಿ ಪ್ರೀಮಿಯಂ ಮೊತ್ತವನ್ನು ತುಂಬಿ ಈ ವಿಮೆ ಮಾಡಿಸಿಕೊಂಡಲ್ಲಿ ರೂ.2 ಲಕ್ಷ ರೂಪಾಯಿಗಳ ಅಪಘಾತ ವಿಮೆ, ಅವಗಡಗಳಿಗೆ ತುತ್ತಾಗಿ ಅಂಗ ವೈಕಲ್ಯತೆಯನ್ನು ಹೊಂದಿದ್ದಲ್ಲಿಯೂ ವಿಮೆ ಹಣ ದೊರೆಯಲಿದೆ. ನಿಮ್ಮ ಹತ್ತಿರದಲ್ಲಿರುವ ಅಂಚೆ ಕಚೇರಿಗೆ ಭೇಟಿ ನೀಡಿ ಈ ಯೋಜನೆಯ ಫಲಾನುಭವಿಗಳಾಗಬಹುದು. ಕೇಂದ್ರ ಸರಕಾರದ ಮಹತ್ವಪೂರ್ಣ ಯೋಜನೆಯಾಗಿರುವ ಈ ಯೋಜನೆಯ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಕರೆ ನೀಡಿದರು.