ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ದಿನಾಂಕ 19 ರಂದು ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಜೊಯಿಡಾ ಬಂದ್ ಮಾಡಲು ಕಾಳಿ ಬ್ರಿಗೇಡ್ ಕರೆ ಕೊಟ್ಟಿದೆ.

ಕಸ್ತೂರಿ ರಂಗನ್ ವರದಿಯ ಕರಡು ಅಧಿಸೂಚನೆಯನ್ನು ವಿರೋಧಿಸಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಅದರಂತೆ ನಮ್ಮ ಜೊಯಿಡಾ ನಮ್ಮ ಹಕ್ಕು ಎಂದಿರುವ ಪ್ರತಿಭಟನಾಕಾರರು ಈ ಮುಂದಿನ ಬೇಡಿಕೆಗಳನ್ನು ಇಟ್ಟಿರುತ್ತಾರೆ.

1. ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ರದ್ದುಪಡಿಸಬೇಕು.
2. ಅರಣ್ಯ ವಾಸಿಗಳ ಹಕ್ಕುಗಳ ರಕ್ಷಣೆ ಆಗಬೇಕು.
3. ಯಾವುದೇ ಅಧಿಸೂಚನೆ ಹೊರಡಿಸುವ ಮುನ್ನ ಸಾರ್ವಜನಿಕರ ಅಹವಾಲು ಸ್ವೀಕರಿಸಲೇ ಬೇಕು.
ಎಂದು ಕಾಳಿ ಬ್ರಿಗೇಡ್ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ಪ್ರತಿಭಟಿಸಲಿದ್ದಾರೆ.

ಜೊಯಿಡಾ ತಾಲೂಕಿನಲ್ಲಿ ವಿವಿಧ ಸಂಘಟನೆಗಳು ತಾಲೂಕಾ ರೈತ ಸಂಘ , ತಾಲೂಕಾ ಭಾಜಪ , ತಾಲೂಕಾ ಕಾಂಗ್ರೆಸ್ ಮತ್ತು ಪ್ರಾಂತೀಯ ರೈತ ಸಂಘ , ಮತ್ತು ಹಳಿಯಾಳ ಜೊಯಿಡಾ ಕ್ಷೇತ್ರದ ಶಾಸಕರು, ಎಲ್ಲರೂ ಈಗಾಗಲೇ ಕಸ್ತೂರಿ ರಂಗನ್ ವರದಿ ವಿರೋಧಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಅದರಂತೆ ಕಾಳಿ ಬ್ರಿಗೇಡ್ ಕೂಡ ಬೃಹತ್ ಪ್ರಮಾಣದಲ್ಲಿ ಪ್ರತಿಭಟಿಸಿ ಸರಕಾರಕ್ಕೆ , ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿ ವರದಿ ವಿರೋಧಿಸಲು ನಿರ್ಧರಿಸಿದೆ.ತಾಲೂಕಿನ ಎಲ್ಲರೂ ಈ ಪ್ರತಿಭಟನೆ ಯಲ್ಲಿ ಭಾಗವಹಿಸಲು ಕರೆ ನೀಡಿದೆ, ಬನ್ನಿ ಭಾಗವಹಿಸಿ, ಬದುಕಲು ಬಿಡದ ಕಸ್ತೂರಿ ರಂಗನ್ ವರದಿ ವಿರೋಧಿಸಿ.