ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ವಿ ಆರ್ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇದರ ವಿಸ್ತರಣಾ ಶಾಖೆ ಜೋಯಿಡಾ ಜಿಲ್ಲಾ ಅಂದತ್ವ ನಿವಾರಣ ವಿಭಾಗ ಕಾರವಾರ ಎಸ್ ಜಿ ಎಂ ಐ ಬ್ಯಾಂಕ್ ಮತ್ತು ಸಂಶೋಧನಾ ಸಂಸ್ಥೆ ಹುಬ್ಬಳ್ಳಿ ಇನ್ನರ್ ವಿಲ್ ಕ್ಲಬ್ ಹುಬ್ಬಳ್ಳಿ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿ ಉಳವಿ ಗ್ರಾಮ ಪಂಚಾಯತ ಉಳವಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಉಳವಿ ಇವರಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ಕಾರ್ಯಕ್ರಮವನ್ನು ಶ್ರೀ ಚನ್ನಬಸವೇಶ್ವರ ಸಭಾಭವನ ಉಳಿವಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಉದ್ಘಾಟಕರಾಗಿ ಎಸ್ ಎಂ ಕಲ್ಮಠ ಶಾಸ್ತ್ರಿಜಿ ಪ್ರಧಾನ ಅರ್ಚಕರು ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಉಳವಿ ಇವರು ಉದ್ಘಾಟಿಸಿ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಮಾಡುವುದರಿಂದ ಉಳಿವಿಯ ಭಾಗದ ಜನರಿಗೆ ಅವರ ಕಣ್ಣಿನ ಬಗ್ಗೆ ಕಾಳಜಿ ಮಾಡದಂತೆ ಆಗುತ್ತದೆ ಅಲ್ಲದೆ ಇದೇ ತರ ಶಿಬಿರವನ್ನು ವರ್ಷದಲ್ಲಿ ಎರಡು ಬಾರಿ ಮಾಡಿದರೆ ಇನ್ನೂ ಜನರಿಗೆ ಅನುಕೂಲವಾಗುತ್ತದೆ ಎಂದು, ಕಣ್ಣಿನ ಫಲಾನುಭಾವಿಗಳ ಕುರಿತು ಮಾತನಾಡಿದರು .

ಮುಖ್ಯ ಅತಿಥಿಗಳಾದ ವಾದಿರಾಜ ಕಟ್ಟಿ ಪಿ. ಆರ್. ಓ . ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ ಇವರು ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು ಅಶೋಕ್ ಸೂರ್ಯವಂಶ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು ವೇದಿಕೆಯಲ್ಲಿ ಮಂಜುನಾಥ್ ಮೊಕಾಶಿ ಅಧ್ಯಕ್ಷರು ಗ್ರಾಮ ಪಂಚಾಯತ್ ಉಳವಿ , ಶ್ರೀಮತಿ ಮಂಜುಳಾ ವಸ್ತ್ರದ್, ಗ್ರಾಮ ಪಂಚಾಯತ್ ಸದಸ್ಯರು,ಜುಬೇರ್ ಶೇಕ್ , ಅಧ್ಯಕ್ಷರು ಸೊಸೈಟಿ ಉಳವಿ ಗೋಪಾಲ್ ಭಟ್ ಭಾರತೀಯ ಕಿಸಾನ್ ಸಂಘ ಸದಸ್ಯರು ಜಿಲ್ಲಾ ಕಮಿಟಿ, ಶ್ರೀಮತಿ ಯೋಗಿತಾ, ಪಿಡಿಒ ಗ್ರಾಮ ಪಂಚಾಯತಿ ಉಳವಿ. ಡಾಕ್ಟರ್ ನಾಗರಾಜ್ ಜಾವುರ್ ಎಂ ಬಿ ಬಿ ಎಸ್ ಪ್ರಾಥಮಿಕ ಆರೋಗ್ಯ ಕೇಂದ್ರ ಉಳವಿ , ಡಾಕ್ಟರ್ ಆದಿತ್ಯ ನೇತ್ರ ತಜ್ಞರು ಎಂ ಎಂ ಜೋಶಿ ಹಾಸ್ಪಿಟಲ್ ಹುಬ್ಬಳ್ಳಿ, ಪ್ರವೀಣ್ ದೊಡ್ಡಮನಿ ಏ ಇ ಇ ಜಿಲ್ಲಾ ಪಂಚಾಯತ್ ಜೋಯಿಡಾ. ಪ್ರಕಾಶ್ ನಾಯಕ್ ವಿಕಾಸ್ ಆಪ್ಟಿಕಲ್ ದಾಂಡೇಲಿ ನೇತ್ರ ಚಿಕಿತ್ಸೆಕರು ಮಂಜುನಾಥ್ ಸಾವಂತ್ ಸಮುದಾಯ ಸಂಘಟಕರು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಜೋಯಿಡಾ ಉಳವಿ ಆಸ್ಪತ್ರೆಯ ಕಮ್ಯುನಿಟಿ ಹೆಲ್ತ್ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಶ್ರೀ ಚನ್ನಬಸವೇಶ್ವರ ಟ್ರಸ್ಟ್ ಕಮಿಟಿಯ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತರು ಉಳವಿ ಹಾಗೂ ನಗರಿ,ನಿಗುಂಡಿ, ಬಿಡೋಲಿಪಾಟ್ನೆ, ಪನಸೋಲಿ, ಕಳಸಾಯಿ, ನುಜ್ಜಿ ಮುಂತಾದ ಗ್ರಾಮದ ಫಲಾನುಭವಿಗಳು ಭಾಗವಹಿಸಿದ್ದರು, ಒಟ್ಟು 125 ಜನರು ಭಾಗವಹಿಸಿದ್ದರು ಅದರಲ್ಲಿ ಶಸ್ತ್ರ ಚಿಕಿತ್ಸೆಗೆ 25 ಜನರು ಆಯ್ಕೆಯಾಗಿರುತ್ತಾರೆ.ಎಂದು ತಿಳಿಸಿರುತ್ತಾರೆ