ಸುದ್ದಿ ಕನ್ನಡ ವಾರ್ತೆ

ಭಟ್ಕಳ: ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ ಕುಟುಂಬವೊAದು ಸೋಮವಾರ ಬೆಳಿಗ್ಗೆ ಸಮುದ್ರಕ್ಕೆ ಇಳಿದಿದ್ದ ಸಂದರ್ಭದಲ್ಲಿ ಸಮುದ್ರದಲ್ಲಿನ ಭಾರೀ ಅಲೆಯ ಹೊಡೆತಕ್ಕೆ ಕೊಚ್ಚಿಕೊಂಡು ಹೋದ ಪುಟ್ಟ ಬಾಲಕನೋರ್ವ ಮೃತಪಟ್ಟ ದುರ್ಘಟನೆ ಸಂಭವಿಸಿದೆ.

ಮೃತ ಬಾಲಕನನ್ನು ಬೆಂಗಳೂರು ಬಿದರಳ್ಳಿಯ ನಿವಾಸಿ ಕೆ.ರವಿ ರೆಡ್ಡಿ ಅವರ ಪುತ್ರ ಕೃತಿಕ್ (೮) ಎಂದು ಗುರುತಿಸಲಾಗಿದೆ.
ಕೆ. ರವಿ ರೆಡ್ಡಿ (೩೯) ತಮ್ಮ ಕುಟುಂಬ ಸಮೇತರಾಗಿ ಸೆಪ್ಟೆಂಬರ್ ೨೧ರ ರಾತ್ರಿ ಮುರ್ಡೇಶ್ವರಕ್ಕೆ ಬಂದು ತಂಗಿದ್ದರು. ಸೋಮವಾರ ಬೆಳಿಗ್ಗೆ ದೇವಸ್ಥಾನದ ಎಡಬದಿಯ ಕಡಲ ತೀರದಲ್ಲಿ ಸಮುದ್ರಕ್ಕೆ ಇಳಿದ ಸಂದರ್ಭದಲ್ಲಿ ಮಕ್ಕಳು ಆಟ ಆಡುತ್ತಾ ನೀರಿನ ಅಲೆಗೆ ಸಿಲುಕಿದ್ದು ತಿಳೀಯದೇ ಪುಟ್ಟ ಬಾಲಕ ಕೊಚ್ಚಿಕೊಂಡು ಹೋಗಿದ್ದಾನೆ.

ಅಲೆಯಲ್ಲಿ ಸಿಲುಕಿ ತೀವ್ರ ಅಸ್ವಸ್ಥಳಾದ ವಸಂತಾ ಕೆ. (೨೭) ಇವರನ್ನು ತಕ್ಷಣ ರಕ್ಷಿಸಿ ಆರ್.ಎನ್.ಎಸ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ರವಿ ರೆಡ್ಡಿಯ ಕಿರಿಯ ಮಗ ಕೃತೀಕ (೮) ಅಲೆಯ ಹೊಡೆತಕ್ಕೆ ತತ್ತರಿಸಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದು ಮೃತ ದೇಹ ಪತ್ತೆಯಾಗಿದೆ. ಘಟನೆಯ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.