ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಕುಣಬಿ ಸಮಾಜ ಭವನದಲ್ಲಿಕುಣಬಿ ಮುಖಂಡರು ಸಭೆ ಸೇರಿದ್ದರು ಈ ಸಭೆಯಲ್ಲಿ ಇಂದಿನಿಂದ ಆರಂಭ ವಾಗುವ ಸಾಮಾಜಿಕ, ಶೈಕ್ಷಣಿಕ ಸಮಿಕ್ಷೆ 2025 ರಲ್ಲಿ ಎಲ್ಲರೂ ಭಾಗವಹಿಸಿ ಮಾಹಿತಿ ನೀಡಲು ಕುಣಬಿ ಸಮಾಜದ ಜನರಲ್ಲಿ ವಿನಂತಿಸಲಾಗಿದೆ.

ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದು, ಜಾತಿ -ಕುಣಬಿ, ಉಪಜಾತಿ -ಕುಣಬಿ ಹಾಗೂ ಭಾಷೆ- ಕೊಂಕಣಿ ಎಂದು ಮನೆಗೆ ಬರುವ ಅಧಿಕಾರಿಗಳಿಗೆ ಮಾಹಿತಿ ನೀಡಿ ಸಹಕರಿಸುವಂತೆ ಸಮಾಜದ ಬಾಂಧವರ ಗಮನಕ್ಕೆ ತರಲಾಗಿದೆ, ಎಂದು ಜಿಲ್ಲಾ ಕುಣಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ ಮಾಹಿತಿ ನೀಡಿದ್ದಾರೆ..

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪ್ರೇಮಾನಂದ ವೇಳಿಪ, ಸಂಸ್ಥಾಪಕ ಅಧ್ಯಕ್ಷ ಮಾಬಳು ಕುಂಡಲಕರ, ಉಪಾಧ್ಯಕ್ಷ ಕೃಷ್ಣ ಮಿರಾಶಿ, ಕಾರ್ಯದರ್ಶಿ ದಯಾನಂದ ಕುಮಗಾಳಕರ, ಖಜಾಂಚಿ ದಿವಾಕರ ಕುಂಡಲಕರ,ಅಂಕೋಲಾ ತಾಲೂಕು ಅಧ್ಯಕ್ಷ ಗಣೇಶ್ ಕುಣಬಿ, ಮುಖಂಡರಾದ ಸುಭಾಷ ವೇಳಿಪ, ಪ್ರಸನ್ನ ಗಾವಡಾ, ರಾಮದಾಸ್ ವೇಳಿಪ, ನಾಗೇಶ್ ಕುಣಬಿ ಯಲ್ಲಾಪುರ ಮುಂತಾದವರು ಇದ್ದರು.