ಸುದ್ದಿ ಕನ್ನಡ ವಾರ್ತೆ
ಜೋಯಿಡಾ :ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ಹಳಿಯಾಳ ಇವರ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ ಹಾಗೂ ಜೆ ಎಸ್ ಡಬ್ಲ್ಯೂ ಪೌಂಡೇಶನ್ ಸಹಯೋಗದೊಂದಿಗೆ ಜೋಯಿಡಾ ತಾಲೂಕಿನ ರೈತ ಮಹಿಳೆಯರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ತಿನ್ನಯಿಘಾಟ್ ನಲ್ಲಿ ನಡೆಸಲಾಯಿತು.
ತರಕಾರಿ ಬೆಳೆಗಳ ಬೇಸಾಯ ಕ್ರಮಗಳು ಸಸ್ಯ ರೋಗ ನಿರ್ವಹಣೆ ಕಾರ್ಯಕ್ರಮವನ್ನು ತಿನ್ನಯ್ ಘಾಟ್ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಲಕ್ಷ್ಮಣ್ ಕಾಂಬ್ಳೆ ಸಹಾಯಕ ತೋಟಗಾರಿಕೆ ಅಧಿಕಾರಿಗಳು ತೋಟಗಾರಿಕೆ ಇಲಾಖೆ ಜೋಯಿಡಾ ಇವರು ಬಂದು ದೀಪ ಬೆಳಗಿಸಿ ಉದ್ಘಾಟಿಸಿ ಮಾಡಿಮಾತನಾಡುತ್ತಾ,. ರೈತ ಮಹಿಳೆಯರಿಗೆ ತರಕಾರಿ ಬೆಳೆಗಳನ್ನು ಯಾವ ರೀತಿ ಬೆಳೆಯಬೇಕು ಬರುವಂಥ ರೋಗಗಳನ್ನು ತಡೆಗಟ್ಟುವ ವಿಧಾನ ಮತ್ತು ತೋಟಗಾರಿಕೆ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳು ಹಾಗೂ ರೋಗ ನಿರ್ವಹಣೆ ಕುರಿತು ತರಬೇತಿ ನೀಡಿದರು ಕಾರ್ಯಕ್ರಮದಲ್ಲಿ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ಸೆಟ್ ಸಂಸ್ಥೆ ವಿಸ್ತರಣಾ ಶಾಖೆ ಜೋಯಿಡಾಇವರು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು ಜೊತೆಗೆ ರೈತ ಮಹಿಳೆಯರಿಗೆ ತರಕಾರಿ ಬೀಜಗಳಾದ ಬೆಂಡೆಕಾಯಿ ಬೀಜ, ಮೂಲಂಗಿ ಬೀಜ, ಬದನೆ ಬೀಜ, ಚವಳಿ ಕಾಯಿ ಬೀಜ ಪಾಕಿಟ್ಗಳನ್ನು ವಿತರಿಸಿದರು ಕಾರ್ಯಕ್ರಮವನ್ನು ಮನೋಹರ್ ಚವ್ ರಿ ಯವರು ನಡೆಸಿ ಕೊಟ್ಟರು ಕಾರ್ಯಕ್ರಮ ದಲ್ಲಿ ಸಾಕಷ್ಟು ಮಹಿಳೆಯರು ಬಾಗವಹಿಸಿ ಲಾಭ ಪಡೆದು ಕೊಂಡರು