ಸುದ್ದಿ ಕನ್ನಡ ವಾರ್ತೆ
ಸರಳ ಸಜ್ಜನಿಕೆಯ, ನೇರ ನಡೆ-ನುಡಿಯ ಮುತ್ಸದ್ದಿ, ತಿಪಟೂರಿನ ಮಾಜಿ ಶಾಸಕರೂ, ಮಾಜಿ ಶಿಕ್ಷಣ ಸಚಿವರೂ ಆಗಿದ್ದ ಬಿ. ಸಿ. ನಾಗೇಶ್ ಅವರ ನಿಧನದ ಸುದ್ದಿ ತಿಳಿದು ತೀವ್ರ ಆಘಾತ ಹಾಗೂ ಅತೀವ ದುಃಖವಾಗಿದೆ.
ಶಾಲೆಗಳಲ್ಲಿ “ವಿವೇಕ ಕೊಠಡಿ”ಗಳಂತಹ ಅದ್ಭುತ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಶ್ರೇಷ್ಠ ರಾಷ್ಟ್ರವಾದಿ ನಾಯಕ ಹಾಗೂ ನನಗೆ ಆತ್ಮೀಯರಾಗಿದ್ದ ಅವರ ಅಗಲಿಕೆ ನಾಡಿಗೆ ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.
ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ಆಘಾತವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದವರಿಗೂ ಹಾಗೂ ಅಪಾರ ಅಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ.ಓಂ ಶಾಂತಿಃಎಂದು ಸಂಸದ
ರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಕಂಬನಿ ಮಿಡಿದಿದ್ದಾರೆ
