ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಳವಳ್ಳಿ ಸಮೀಪದ ವಾಗಳ್ಳಿಯಲ್ಲಿ ಅಡಿಕೆ ಮರದಿಂದ ಕಾಲು ಜಾರಿ ಬಾವಿಗೆ ಬಿದ್ದು ವಯೋ ವೃದ್ಧ ಕೃಷಿಕರು ಸಾವನ್ನಪ್ಪಿದ ಘಟನೆ ನಡೆದಿದೆ.
ತಮ್ಮ ತೋಟದಲ್ಲಿದ್ದ ಅಡಿಕೆ ಮರಕ್ಕೆ ಏಣಿ ಹಾಕಿಕೊಂಡು ಮರ ಹತ್ತುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಇದೆ ಅಡಿಕೆ ಮರದ ಪಕ್ಕದಲ್ಲಿ ಇದ್ದ ಬಾವಿಗೆ ಬಿದ್ದು ಗಣಪತಿ ಶಿವರಾಮ ಗಾಂವ್ಕರ್ (೯೬ ವರ್ಷ ) ವಾಗಳ್ಳಿ ರವರು ಸಾವನ್ನಪ್ಪಿದ್ದಾರೆ.
ಗುರುವಾರ ಬೆಳಿಗ್ಗೆ ಇವರು ಕವಳಕ್ಕೆ ಎಲೆ ತರಲು ತಮ್ಮ ತೋಟಕ್ಕೆ ಹೋಗಿದ್ದರು. ತೋಟದಲ್ಲಿ ಏಣಿ ಹಾಕಿಕೊಂಡು ಅಡಿಕೆ ಮರ ಏರುತ್ತಿದ್ದಾಗ ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಕುರಿತು ಚಂದ್ರಶೇಖರ ಗಣಪತಿ ಗಾಂವ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.