ಸುದ್ದಿ ಕನ್ನಡ ವಾರ್ತೆ

ಜೋಯಿಡಾ : ತಾಲೂಕಿನ ರಾಮನಗರ ಬಸ್ ನಿಲ್ದಾಣದ ಶೌಚಾಲಯ ಗಬ್ಬು ನಾರುತ್ತಾ ಸೊಳ್ಳೆ ಗಳ ಕೇಂದ್ರ ವಾಗಿರುವುದಕ್ಕೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ .

ಜೋಯಿಡಾ ತಾಲೂಕಿನ ರಾಮನಗರ, ಗೋವಾ, ಬೆಳಗಾವಿ ಹುಬ್ಬಳ್ಳಿ, ಕಾರವಾರ, ಗಳಿಗೆ ಹೋಗಲು ಮುಖ್ಯ ಕೇಂದ್ರ ವಾಗಿದೆ, ಇಲ್ಲಿ ಯ ಬಸ್ ನಿಲ್ದಾಣಕ್ಕೆ ಪ್ರತಿ ದಿನವೂ, ನೂರಾರು ಬಸ್ ಗಳು ನಾಲ್ಕೂ ದಿಕ್ಕಿನ ಪ್ರಮುಖ ನಗರ ಗಳಿಗೆ ಹೋಗಲು ಬರುವುದು ಹೋಗುವುದು ನಡೆದಿರುತ್ತದೆ, ಈ ಕಾರಣ ದಿಂದಇಲ್ಲಿಶೌಚಾಲಯಉತ್ತಮವಾಗಿರಬೇಕಿತ್ತುಆದರೆ ಇಲ್ಲಿನ ಶೌಚಾಲಯ ಅಬ್ಬಬ್ಬಾ ಗಬ್ಬು ನಾರುತ್ತಿದೆ, ಹತ್ತಿರ ಕೂಡ ಹೋಗಲು ಸಾಧ್ಯ ವಿಲ್ಲದ ಪರಿಸ್ಥಿತಿ ಇದೆ. ಕಳೆದ ಒಂದು ವರ್ಷದ ದಿಂದಲೂ ಇತ್ತ ಕಡೆ ಹುಬ್ಬಳ್ಳಿ ವಾ,ಕ ಸಾ ಇಲಾಖೆ ಅಧಿಕಾರಿಗಳು ಮುಖ ಹಾಕದೇ ಜನರ ವಾಕರಿಕೆ ಹೆಚ್ಚಿಸಿದ್ದಾರೆ ಎಂದು ಸ್ಥಳೀಯ ಜನರು ದೂರಿದ್ದಾರೆ, ದೂರದ ಊರುಗಳಿಂದ ಬರುವ ಮಕ್ಕಳು, ಮಹಿಳೆಯರು, ಇಲ್ಲಿನ ಸ್ಥಿತಿಗೆ ಶಾಪ ಹಾಕುತ್ತಿದ್ದಾರೆ. ಶೌಚಾಲಯ ಕ್ಕೆ ಹೋಗಲೂ, ಆಗದೇ, ತಡೆಯಲೂ ಆಗದೇ ಸಾರ್ವಜನಿಕರು, ಪ್ರವಾಸಿಗರುಇಲಾಖೆಗೆಶಾಪಹಾಕುತ್ತಿದ್ದಾರೆ .ಮಳೆಗಾಲದ ಈ ದಿನಗಳಲ್ಲಿ ಕೊಳೆತ ಗಬ್ಬು ವಾಸನೆ, ಪ್ರವಾಸಿಗರಿಗೆ, ವಾಕರಿಕೆ ತರಿಸಿದರೆ, ಅಕ್ಕ ಪಕ್ಕದಲ್ಲಿರುವ ಸ್ಥಳೀಯರಿಗೆ, ಸಾಕಪ್ಪ ಸಾಕು, ಇದರ ಸಹವಾಸ ಎಂಬಂತಾಗಿದೆ. .

ರಾಮನಗರದ ಶೌಚಾಲಯ ಸಮಸ್ಯೆಬಗ್ಗೆಸಾರಿಗೆ ವಿಭಾಗಕ್ಕೆ ತಿಳಿಸಿದ ರಾಮನಗರ ಗ್ರಾಮ ಪಂಚಾಯತ ಅಧ್ಯಕ್ಷಶಿವಾಜಿಗೋಸಾವಿ,ಅವರು ಗುರುವಾರ ಸಾರಿಗೆ ಇಲಾಖೆ ಯ ಹುಬ್ಬಳ್ಳಿ ವಿಭಾಗದ ಅಧಿಕಾರಿ ಕಿರಣ್ ಕುಮಾರ ರೊಂದಿಗೆ ರಾಮನಗರದಲ್ಲಿ ಸ್ಥಳ ಪರಿಶೀಲನೆ ನಡೆಸಿದರು ಕೂಡಲೇ ಅಗತ್ಯ ಕ್ರಮ ಕೈಕೊಂಡು ವ್ಯವಸ್ಥೆ ಸರಿ ಪಡಿಸಿ ಕೊಡಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದು. ಗ್ರಾಮ ಪಂಚಾಯತ ಅಧ್ಯಕರ ಸಲಹೆಯಂತೆ, ಕೂಡಲೇ ಸಮಸ್ಯೆ ಬಗೆಹರಿಸಿ ಕೊಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆಂದು ಅಧ್ಯಕ್ಷ ಶಿವಾಜಿ ಗೋಸಾವಿ ತಿಳಿಸಿದ್ದಾರೆ, ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಅಂಬರೀಶ್ ಇದ್ದರು.