Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ :ತಾಲೂಕಿನ ನಾಗೋಡ ಗ್ರಾಮ ಪಂಚಾಯತದ ಕೊಲಗದ್ದೆ ಯಲ್ಲಿ ಕರಡಿ ದಾಳಿಯಿಂದ ರೈತ ಗಾಯಗೊಂಡ ಘಟನೆ ನಡೆದಿದೆ. ನಾಗು ವಿಠು ಪಾಟೀಲ ಈತನು ಇಂದು ಮಧ್ಯಾನ್ಹ 4 ಘಂಟೆ ಸುಮಾರಿಗೆ ಎಮ್ಮೆ ದನಕರುಗಳನ್ನು ಹುಡುಕಲು ಮನೆಯ ಪಕ್ಕದ ಕಾಡಿಗೆ ಹೋದಾಗ ಕರಡಿ ದಾಳಿ ಮಾಡಿದೆ.

Banner Ad

 

ಕರಡಿ ದಾಳಿಯಿಂದ ಕಂಗಾಲಾದ ನಾಗೂ ಪಾಟೀಲ ಜೋರಾಗಿ ಕೂಗಿದಾಗ ಅಕ್ಕ ಪಕ್ಕದವರು ಬಂದು ದಾಳಿ ಯಿಂದ ಬಿಡಿಸಿದ್ದಾರೆ. ಕೂಡಲೇ ಜೊಯಿಡಾ ಸರಕಾರಿ ಆಸ್ಪತ್ರೆಗೆ ಗಾಯಾಳುವನ್ನು ದಾಖಲು ಮಾಡಿದ್ದು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಕಳೆದ ವರ್ಷ ಇಬ್ಬರ ಮೇಲೆ ಕರಡಿ ದಾಳಿ ಮಾಡಿತ್ತು. ಕಳೆದ ವಾರ ಅವುರ್ಲಿಯಲ್ಲಿ ಮಹಿಳೆಯ ಮೇಲೆ ಚಿರತೆ ದಾಳಿ ಮಾಡಿದ್ದನ್ನು ನೆನಪಿಸಬಹುದಾಗಿದೆ.

Banner Ad