ಸುದ್ದಿ ಕನ್ನಡ ವಾರ್ತೆ
ಕಾಡುಕೋಣವನ್ನು ಭೇಟೆ ಯಾಡಿದ ಆರೋಪದ ಮೇಲೆ ಒಬ್ಬ ನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದು ಈ ಘಟನೆ ತಾಲೂಕಿನ ಹುಲೇಕಲ್ ವಲಯದ ಮಠದೇವಳ ಗ್ರಾಮದಲ್ಲಿ ನಡೆದಿದೆ.
ಅಬ್ದುಲ್ ಸಲೀಮ್ ಅಬ್ದುಲ್ ರಬ್ಬು ಸಾಬ (44) ಬಂಧಿತ ಆರೋಪಿ. ಇನ್ನೂ 4 ಜನ ಆರೋಪಿಗಳು ಪರಾರಿಯಾಗಿದ್ದು , ಆರೋಪಿಗಳ ಬಂಧನಕ್ಕೆ ಅರಣ್ಯ ಇಲಾಖೆ ಬಲೆಬೀಸಿದೆ. ಆರೋಪಿಗಳೆಲ್ಲರೂ ಸೋದೆಪೇಟೆಯವರಾಗಿದ್ದಾರೆ.
ಆರೋಪಿಗಳು ಮಠದೇವಳ ಗ್ರಾಮದ ಸ.ನಂ.226ರಲ್ಲಿ ಕಾಡುಕೋಣವನ್ನು ಭೇಟೆ ಮಾಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಆರೋಪಿಯನ್ನು ಬಂಧಿಸಿ ಕಾಡುಕೋಣದ ಮಾಂಸದ ಅವಶೇಷಗಳು ಹಾಗೂ ಕೃತ್ಯಕ್ಕೆ ಬಳಸಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್ ಮಾರ್ಗದರ್ಶನದಲ್ಲಿ ಹುಲೇಕಲ್ ವಲಯ ಅರಣ್ಯಾಧಿಕಾರಿ ಶಿವಾನಂದ ನಿಂಗಾಣಿ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಶರತ್ ಐಹೋಳ್ಳಿ ಹಾಗೂ ಸಿಬ್ಬಂದಿಗಳು
ಗಸ್ತು ಪಾಲಕರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
